September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವಿದ್ಯಾರ್ಥಿನಿ ಅಪಹರಣ ಯತ್ನ : ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ಬೆಳ್ತಂಗಡಿ: ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕಾಲೇಜು ಹೋಗುವ ವೇಳೆ ಅಪರಿಚಿತ ಗೂಂಡಾಗಳು ಅಪಹರಿಸಲು ಯತ್ನಿಸಿ, ಚಾಕುವಿನಿಂದ ಇರಿದ ಘಟನೆ ಅತ್ಯಂತ ಬೆಚ್ಚಿಬೀಳಿಸುವಂತದ್ದು. ಇದು ಹೆಣ್ಣು ಮಕ್ಕಳ ಸುರಕ್ಷತೆಯ ಮೇಲೆ ದೊಡ್ಡ ಸವಾಲು ಎತ್ತಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷೆ ಶಿನೀರ ಖಂಡಿಸಿದರು.

ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಎಪ್‌ಸ್ಟೀನ್ ಫೈಲ್ಸ್ ಮತ್ತು ನ್ಯಾಯ ಸಿಗದೇ ಉಳಿದಿರುವ ಸ್ಥಳೀಯ ಮಟ್ಟದಲ್ಲಿ ನಡೆದ ಬೆಳ್ತಂಗಡಿ ಸೌಜನ್ಯ ಪ್ರಕರಣ ಇರುವಾಗಲೇ ಹೆಣ್ಣು ಮಕ್ಕಳ ಮೇಲಿನ ಅಪಹರಣ, ದುರ್ವ್ಯವಹಾರ ಮತ್ತು ದೌರ್ಜನ್ಯಗಳ ಭೀತಿ ಇನ್ನೂ ಮುಗಿದಿಲ್ಲ ಎಂಬುದು ಈ ಘಟನೆ ಸ್ಪಷ್ಟಪಡಿಸಿದೆ ಎಂದು ಹೇಳಿದರು.


ಹಾಡುಹಗಲೇ ನಡೆದಿರುವ ಈ ಅಪಹರಣ ಯತ್ನ ಬೆಳ್ತಂಗಡಿ ಜನತೆಯಲ್ಲಿ ಗಂಭೀರ ಆತಂಕವನ್ನು ಉಂಟುಮಾಡಿದೆ. ಹೆಣ್ಣು ಮಕ್ಕಳನ್ನು ನಿರಂತರವಾಗಿ ಅಭದ್ರತೆಯ ವಾತಾವರಣಕ್ಕೆ ತಳ್ಳುವಂತಹ ಘಟನೆಗಳನ್ನು ಸಮಾಜ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಅಪರಾಧಿಗಳನ್ನು ಪತ್ತೆ ಮಾಡಿ, ಅವರನ್ನು ಕಾನೂನಿನ ಮುಂದೆ ನಿಲ್ಲಿಸಿ, ಈ ಕ್ರತ್ಯದ ಹಿಂದೆ ಇರುವ ಕಾಣದ ಕೈಗಳನ್ನು ಯಾವುದೇ ಒತ್ತಡಗಳಿಗೆ ಮಣಿಯದೆ ಹೊರತೆಗೆದು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕಠಿಣ ನಿಗಾ ಮತ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಹಿಳೆಯರ ಸುರಕ್ಷತೆ ರಾಜ್ಯದ ಜವಾಬ್ದಾರಿಯಷ್ಟೇ ಅಲ್ಲ, ಸಮಾಜದ ಒಟ್ಟಾರೆ ಬದ್ಧತೆಯ ಪರೀಕ್ಷೆ ಎಂದು ಅವರು ಗಂಭೀರವಾಗಿ ಸೂಚಿಸಿದರು.

Related posts

ಅ.31: ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ದೀಪಾವಳಿ ದೋಸೆಹಬ್ಬ ಹಾಗೂ ಗೋ ಪೂಜಾ ಉತ್ಸವ

Suddi Udaya

ಪೆರಿಂಜೆಯ ಶಾಲೆಯಲ್ಲಿ ಉಜಿರೆಯ ಶ್ರೀ ಧ. ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya

ಬಜಿರೆ ಹೊಸಪಟ್ಣ ಪೇರಂದಡ್ಕ ನಿವಾಸಿ ಸುಂದರಿ ನಿಧನ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ರೋಟರೀ ಕ್ಲಬ್ ನಿಂದ ರೂ. 40 ಲಕ್ಷ ಮೌಲ್ಯದ ಕೊಡುಗೆ

Suddi Udaya

ಎಸ್.ಡಿ.ಎಂ ಪ.ಪೂ‌ ಕಾಲೇಜಿನ‌ ಕನ್ನಡ ಸಂಘ ಉದ್ಘಾಟನೆ

Suddi Udaya
error: Content is protected !!