30.3 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕಳಿಯ: ಬೈಕ್ ನಲ್ಲಿ ಹೋಗುತ್ತಿದ್ದ‌ ಸಹ ಸಾವರೆ ಮಹಿಳೆಯೋವ೯ರ ಕಾಲು ಸೈಲೇಸರ್‌ ಮತ್ತು ಚೇಸ್‌ ನಡುವೆ ಸಿಲುಕಿ ಗಾಯ

ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ, ಬೈಕ್ ನಲ್ಲಿ ಹೋಗುತ್ತಿದ್ದ‌ ಸಹ ಸಾವರೆ ಮಹಿಳೆಯೋವ೯ರ ಕಾಲು ಸೈಲೇಸರ್‌ ಮತ್ತು ಚೆಸ್ ನಡುವೆ ಸಿಲುಕಿಕೊಂಡು ಗಾಯಗೊಂಡ ಘಟನೆ ಜ.3 ರಂದು ನಡೆದಿದೆ.

ಕೊಯ್ಯುರು ಗ್ರಾಮದ ಉಸ್ಮಾನ್ ಎಂಬವರ ದೂರಿನಂತೆ, ಜ. 3 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ, ಕೆಎ21ಎಕ್ಸ್2186ನೇ ಬೈಕ್ ನಲ್ಲ ಅದರ ಸವಾರ ಹನೀಪ್‌ ರವರು ಸಹಸವಾರೆ ನೆಬಿಸಾ (68 ವರ್ಷ) ಎಂಬವರನ್ನು ಕುಳ್ಳಿರಿಸಿಕೊಂಡು, ದ್ವಿಚಕ್ರ ವಾಹನವನ್ನು ದುಡುಕುತನದಿಂದ ಸವಾರಿ ಮಾಡಿದ ಪರಿಣಾಮ, ಸಹಸವಾರೆ ನೆಬಿಸಾರವರ ಬಲಕಾಲು ದ್ವಿಚಕ್ರ ವಾಹನದ ಸೈಲೆನ್ಸರ್‌ ಹಾಗೂ ಚೇಸ್‌ ನಡುವೆ ಹೋಗಿ ಸಿಲುಕಿಕೊಂಡು ಗಾಯವುಂಟಾದವರನ್ನು, ಚಿಕಿತ್ಸೆಗಾಗಿ ಗುರುವಾಯನಕೆರೆ ಅಭಯ ಆಸ್ಪತ್ರೆಗೆ ಕರೆದುಕೊಂಡು ಬಂದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುವುದಾಗಿ ನೀಡಿದ ದೂರಿನಂತೆ, ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 02/2024 ಕಲಂ: 279,337 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ಆಶ್ರಯದಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಶೂ ಹಾಗೂ ಸಮವಸ್ತ್ರ ವಿತರಣೆ

Suddi Udaya

ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ ಯಂತ್ರ ಉದ್ಘಾಟನೆ

Suddi Udaya

ಧರ್ಮಸ್ಥಳ ಗ್ರಾ.ಪಂ. ವತಿಯಿಂದ ನಿವೃತ್ತ ಸರಕಾರಿ ಅಧಿಕಾರಿಗಳಿಗೆ ಸನ್ಮಾನ

Suddi Udaya

ಧರ್ಮಸ್ಥಳ: ನೇತ್ರಾವತಿ ಸೇತುವೆಯ ಕೆಳಭಾಗದ ನದಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್‌ನಿಂದ 542ನೇ ಸೇವಾ ಯೋಜನೆ: ಅ.1: 11 ಆಶ್ರಮಗಳಿಗೆ ಅಕ್ಕಿ, 11 ಬಡರೋಗಿಗಳಿಗೆ ವಸ್ತ್ರ, 11 ವಿವಿಧ ಬಗೆಯ ಹಣ್ಣುಹಂಪಲು ವಿತರಣೆ: ಡಿ.28: ಮಂಗಳೂರಿನಲ್ಲಿ 12 ಜೋಡಿಗಳ ಉಚಿತ ಸಾಮೂಹಿಕ ವಿವಾಹ

Suddi Udaya

ಕಿಂಡಿ ಅಣೆಕಟ್ಟುಗಳಲ್ಲಿ ಸಿಲುಕಿದ ಕಸಕಡ್ಡಿಗಳ ಸ್ವಚ್ಛತಾ ಕಾರ್ಯ

Suddi Udaya
error: Content is protected !!