32.9 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕನ್ನಡ, ತುಳು ಸಾರಸ್ವತ ಲೋಕದ ಖ್ಯಾತ ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ಡಾ. ಅಮೃತ ಸೋಮೇಶ್ವರ ರವರ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

ಬೆಳ್ತಂಗಡಿ: ಕನ್ನಡ, ತುಳು ಸಾರಸ್ವತ ಲೋಕದ ಖ್ಯಾತ ಸಾಹಿತಿಯಾಗಿ, ಸಂಶೋಧಕರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ಡಾ. ಅಮೃತ ಸೋಮೇಶ್ವರವರು ಮೃದು ಸ್ವಭಾವಿ, ಸಹೃದಯಿಯಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಯಕ್ಷಗಾನ ಮೇಳಕ್ಕೆ ಪುರಾಣ, ಐತಿಹಾಸಿಕ ಸೇರಿದಂತೆ 11 ಪ್ರಸಂಗಗಳನ್ನು ಬರೆದುಕೊಟ್ಟಿದ್ದರು. ಅವುಗಳ ಯಶಸ್ವಿ ಪ್ರಯೋಗಗಳು ನಡೆಯುತ್ತಿದ್ದವು. ತುಳುವಿನಲ್ಲಿ ಬರೆದ ಅವರ ಅನೇಕ ಹಾಡುಗಳು ಪ್ರಸಿದ್ಧವಾಗಿದ್ದವು. ಕೆಲವು ಹಾಡಿನ ತುಳು ಭಾಷಾಂತರ ಕೂಡ ಮಾಡಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿ ಮೇರು ಸಾಹಿತಿಯಾಗಿದ್ದ ಅವರನ್ನು ಕಳೆದುಕೊಂಡದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.


ಬದುಕಿನ ಪ್ರಯಾಣದ ನಡುವೆ ಅನಂತ ಸಾಧನೆಗೈದು ಜನಪ್ರಿಯರೂ ಬಹುಮಾನ್ಯರೂ ಆಗಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಅಭಿಮಾನಿಗಳಾಗಿದ್ದು ನಿರಂತರ ಸಂಪರ್ಕದಲ್ಲಿದ್ದವರು.
ನಾಡು ಇಂದು ಅತ್ಯಂತ ಹಿರಿಯ ಹಾಗೂ ಮೇಧಾವಿ ಸಾಹಿತಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕುವಂತೆ ಭಗವಾನ್ ಶ್ರೀ ಮಂಜುನಾಥ ಸ್ವಾಮಿ ಅನುಗ್ರಹಿಸಲೆಂದು ಪ್ರಾರ್ಥಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದರು.

Related posts

ಮರೋಡಿ: ಅರುಣೋದಯ ಯುವಕ ಮಂಡಲದಿಂದ ‘ಆಟಿದ ತಿನಸ್ ಬಂಜರ ವನಸ್’ ಕಾರ್ಯಕ್ರಮ

Suddi Udaya

ಒಡಿಯೂರು ಶ್ರೀ ಸೌಹಾರ್ದ ಸಹಕಾರಿ ಸಂಘದ 22ನೇ ಮಡಂತ್ಯಾರು ಶಾಖೆ ಉದ್ಘಾಟನೆ

Suddi Udaya

ಬಂದಾರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆ

Suddi Udaya

ಉಜಿರೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಉಷಾ ಕಾರಂತ್, ಉಪಾಧ್ಯಕ್ಷರಾಗಿ ರವಿ ಕುಮಾರ್ ಆಯ್ಕೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಕ್ಕಳಿಗೆ ಹಿಂದೂ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವರ ಪ್ರತಿಷ್ಠಾಷ್ಟಬಂಧ ಬಹ್ಮಕಲಶೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಕ್ವಿಂಟಾಲ್ ಅಕ್ಕಿ ಹೊರೆಕಾಣಿಕೆ ಸಮರ್ಪಣೆ

Suddi Udaya
error: Content is protected !!