April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೊಗ್ರು : ಮುಗೇರಡ್ಕ ದೈವಸ್ಥಾನ ವತಿಯಿಂದ ಮುಗೇರಡ್ಕ ಮುಳುಗು ಸೇತುವೆ ಸಂಚಾರಕ್ಕೆ ಮುಕ್ತ

ಮೊಗ್ರು ಗ್ರಾಮದ ಮುಗೇರಡ್ಕ ದೈವಸ್ಥಾನ ಪಕ್ಕದಲ್ಲಿ ಹರಿಯುತ್ತಿರುವ ಪವಿತ್ರ ನದಿ ನೇತ್ರಾವತಿ ಕಿನಾರೆಯಲ್ಲಿ ಇರುವ ಮುಳುಗು ಸೇತುವೆ ಪ್ರತಿ ವರ್ಷದಂತೆ ಈ ವರ್ಷನು ಮಳೆ ನೀರಿಗೆ ಕೊಚ್ಚಿ ಹೋಗಿದ್ದು ಡಿಸೆಂಬರ್ ನಂತರ ಸೇತುವೆಯ ಸಂಪರ್ಕ ರಸ್ತೆಯನ್ನು ಸಾರ್ವಜನಿಕ ಸೇವೆಗೆ ಬಳಸಲು ಅನುಕೂಲವಾಗುವಂತೆ ಮಾಡಲು ಸರಕಾರದ ಯಾವುದೇ ಅನುದಾನ ಇಲ್ಲದೇ ಅಂದಾಜು ಸುಮಾರು 53000 ವೆಚ್ಚದಲ್ಲಿ ಮುಗೇರಡ್ಕ ದೈವಸ್ಥಾನ ವತಿಯಿಂದ ಈ ವರ್ಷನೂ ಈ ರಸ್ತೆಗೆ ಹಿಟಾಚಿ ಮೂಲಕ ರಸ್ತೆ ದುರಸ್ತಿ ಮಾಡಲಾಯಿತು.


ಸುಮಾರು 30 ವರ್ಷಗಳ ಹಿಂದೆ ಮುಗೇರಡ್ಕ ದೈವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ಅಕ್ಕಿಮುಡಿ, ಹರಾಜು ಹಾಕಿ, ಸ್ಥಳೀಯ ಗ್ರಾಮಸ್ತರ ದೇಣಿಗೆ ಪಡೆದು ಅಂದಿನ ಕಾಲದ ಅನುಕೂಲಕ್ಕೆ ತಕ್ಕಂತೆ ನಿರ್ಮಾಣ ಆದ ಮುಗೇರಡ್ಕ ಮುಳುಗು ಸೇತುವೆಯು ಪ್ರತಿ ಮಳೆಗಾಲದ ಪ್ರವಾಹದಲ್ಲಿ ಮುಳುಗಡೆ ಆಗಿ ಆ ಸೇತುವೆಯ ಮುಕ್ಕಾಲು ಭಾಗ ನೀರಲ್ಲಿ ಕೊಚ್ಚಿ ಹೋಗುವುದು ವಾಡಿಕೆ.

ಈ ಸೇತುವೆ ಡಿಸೆಂಬರ್ -ಜೂನ್ ತನಕ ಸಂಚಾರಕ್ಕೆ ತೆರೆದು ಮೊಗ್ರು, ಬಂದಾರು, ಕಣಿಯೂರು , ಇಳoತಿಲ ಗ್ರಾಮ ಹಾಗೂ ಉಜಿರೆ ಕಡೆಯಿಂದ ಬರುವ ಮತ್ತು ಉಜಿರೆ ಬೆಳ್ತಂಗಡಿ ಧರ್ಮಸ್ಥಳ ತನಕದ ಜನರಿಗೆ ಪುತ್ತೂರು ತಾಲೂಕು ಹಾದು ಹೋಗುವ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕ ಮಾಡಲು ಅನುಕೂಲವಾಗುತ್ತೆ. ಮಳೆಗಾಲ ಸಮಯದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ 50% ರಸ್ತೆ ನೀರಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತವಾಗುತ್ತೆ. ಈ ತಾತ್ಕಾಲಿಕ ಸೇತುವೆ ದಿನ ನಿತ್ಯ ಸಾವಿರಾರು ವಾಹನ ಓಡಾಟ ಇರುವ ಕಾರಣ ಪ್ರತಿ ವರ್ಷ ದೈವಸ್ಥಾನ ವತಿಯಿಂದ ರಿಪೇರಿ ಮಾಡುವ ಕಾರ್ಯ ಅನೇಕ ವರ್ಷಗಳಿಂದ ನಡೆದು ಬಂದಿರುತ್ತದೆ.

ಇದೇ ಜಾಗದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಇವರ ಪ್ರಯತ್ನದಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಇಲ್ಲಿಗೆ ಒಂದು ಬೃಹತ್ ಸೇತುವೆ ಸಹಿತ ಕಿಂಡಿ ಆಣೆಕಟ್ಟಿಗೆ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗಿ ತುಂಬಾ ವೇಗದಿಂದ ಇದ್ದ ನಿರ್ಮಾಣಕಾರ್ಯ ನಡೆಯುತ್ತಿತ್ತು ,ಯಾಕೋ ಕೆಲವು ದಿನಗಳಿಂದ ನಿಧಾನವಾಗಿ ಸಾಗುತಿದ್ದು,ಇನ್ನೂ ಕೆಲವು ವರ್ಷ ಇದೇ ಹಳೆ ಸೇತುವೆ ಅವಲಂಬಿಸಬೇಕಾದ ಅನಿವಾರ್ಯತೆಯಲ್ಲಿ ಜನ ಸಾಮಾನ್ಯರು ಸರಕಾರದ ನಡೆಗೆ ಹಿಡಿ ಶಾಪ ಹಾಕುತಿದ್ದು,ಮುಗೇರಡ್ಕ ದೈವಸ್ಥಾನದ ವತಿಯಿಂದ ಪ್ರತಿ ವರ್ಷ ನಡೆಯುವ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೀಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದಷ್ಟು ಬೇಗ ಮುಗೇರಡ್ಕ ಸೇತುವೆ ಕಾಮಗಾರಿಗೆ ವೇಗ ಸಿಗಲಿ ಆದಷ್ಟು ಶೀಘ್ರದಲ್ಲಿ ಪ್ರಯಾಣಿಕರಿಗೆ ಸೇತುವೆಯು ಸಂಚಾರಕ್ಕೆ ಅನುಕೂಲವಾಗಲಿ ಎಂಬುದೇ ರಾಜ್ಯ ಸರ್ಕಾರಕ್ಕೆ ನಾಗರಿಕರ ಒಕ್ಕೊರಲ ಬೇಡಿಕೆಯಾಗಿದೆ.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅನ್ನಛತ್ರದಲ್ಲಿ ಹಾಲು ಉಕ್ಕಿಸುವ ಕಾರ್ಯ

Suddi Udaya

ಯುವವಾಹಿನಿ ವೇಣೂರು ಘಟಕ ಹಾಗೂ ಶ್ರೀ.ಗು.ನಾ. ಸ್ವಾ.ಸೇ. ಸಂಘ ಕೊಕ್ರಾಡಿ ಇದರ ಜಂಟಿ ಆಶ್ರಯದಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮ ಹಾಗೂ ನಾಟಿ ವೈದ್ಯರಿಗೆ ಸನ್ಮಾನ

Suddi Udaya

ರೆಖ್ಯ: ಅಕ್ರಮವಾಗಿ ಲಾರಿಯಲ್ಲಿ ಅಕೇಷಿಯ ಮತ್ತು ಮ್ಯಾಜಿಯಂ ಮಿಶ್ರಿತ ಬಿಲ್ಲೆಟ್ಸ್ ಸಾಗಾಟ:

Suddi Udaya

ಬೆಳಾಲು ಶ್ರೀ ಮಹಮ್ಮಾಯಿ ಗುಳಿಗ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ರಚನೆ

Suddi Udaya

ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಶರತ್ ಕೃಷ್ಣ ಪಡ್ವೆಟ್ನಾಯ ಭೇಟಿ : ಸಕಲ ಸಿದ್ಧತೆಗಳ ವೀಕ್ಷಣೆ

Suddi Udaya

ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ‌.ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವಾಧ್ಯಕ್ಷ ಚೈತ್ರೇಶ್ ಇಳಂತಿಲರವರ ‘ಅಕ್ಷೋಭ್ಯ’ ನೂತನ ಮನೆಗೆ ಭೇಟಿ

Suddi Udaya
error: Content is protected !!