25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ: ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಚಾರಣೆಯ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ

ಧರ್ಮಸ್ಥಳ :ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.5 ರಂದು ವಾರ್ಷಿಕ ಪ್ರತಿಭಾ ದಿನಚಾರಣೆಯ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಸತ್ಯವತಿ ಮತ್ತು ಶ್ರೀಮತಿ ಗಿರಿಜರವರು ಭಾಗವಹಿಸಿ ಮಕ್ಕಳನ್ನು ಹರಸಿ ಹಾರೈಸಿದರು.
ಸಾಂಸ್ಕೃತಿಕ ಬಹುಮಾನದ ಪಟ್ಟಿಯನ್ನು ಶ್ರೀಮತಿ ಸೀಮಾ, ಶ್ರೀಮತಿ ಪೂರ್ಣಿಮಾ ವಾಚಿಸಿದರು. ಕ್ರೀಡಾ ಬಹುಮಾನವನ್ನು ಸಂಜೀವ ಕೆ ವಾಚಿಸಿದರು.
ಅಧ್ಯಕ್ಷ ಸ್ಥಾನವನ್ನು ಮುಖ್ಯ ಶಿಕ್ಷಕ ಪಿ ಸುಬ್ರಹ್ಮಣ್ಯ ರಾವ್ ಮಕ್ಕಳನ್ನು ಉದ್ದೇಶಿಸಿ ಸ್ಪರ್ಧೆಯಲ್ಲಿ ಸೋಲು ಗೆಲುವು ಎರಡೂ ಇದೆ. ಸೋಲೇ ಗೆಲುವಿನ ಮೆಟ್ಟಿಲು. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಯಶಸ್ಸನ್ನು ಗಳಿಸಿ ಎಂದು ಹೇಳಿದರು.


ಮಕ್ಕಳಿಂದ ಪ್ರಾರ್ಥನೆ, ಶ್ರೀಮತಿ ಕಾವ್ಯ ನಿರೂಪಿಸಿ, ಶ್ರೀಮತಿ ಕೇಶವತಿ ಧನ್ಯವಾದವಿತ್ತರು. ಎಲ್ಲಾ ಶಿಕ್ಷಕರು ಸಹಕರಿಸಿದರು.

Related posts

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಅಂಗಣೋತ್ಸವ , ದೇವರ ದರ್ಶನ ಬಲಿ

Suddi Udaya

ಕೊಜಪ್ಪಾಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಅಲಂಕೃತಗೊಂಡ ನಾರಾವಿ ಸಖಿ ಮತದಾನ ಕೇಂದ್ರದಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ

Suddi Udaya

ಸುಂದರ ಮಲೆಕುಡಿಯ ಕೈ ಬೆರಳು ತುಂಡರಿಸಿ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ: ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ: ಅಕ್ಬರ್ ಬೆಳ್ತಂಗಡಿ

Suddi Udaya

ಬಟ್ಟೆಗಳ ಬೃಹತ್ ಸಂಗ್ರಹದೊಂದಿಗೆ ಬೆಳ್ತಂಗಡಿ ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್ ಶೇ.10 ಡಿಸ್ಕೌಂಟ್ ಸೇಲ್

Suddi Udaya

ನಗರ ಪಂಚಾಯತದ ಒಳಚರಂಡಿಗೆ ಬಿದ್ದ ದನ: ಅಗ್ನಿಶಾಮಕದವರ ಸಹಕಾರದಿಂದ ಮೇಲಕ್ಕೆ

Suddi Udaya
error: Content is protected !!