24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರಿಗೆ ಅಯೋಧ್ಯೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆ

ಬೆಳ್ತಂಗಡಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಪವಿತ್ರ ಅಕ್ಷತೆಯನ್ನು ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರಿಗೆ ನೀಡಿ ಆಶೀರ್ವಾದ ಪಡೆಯಲಾಯಿತು.


ಈ ಸಂದರ್ಭದಲ್ಲಿ ಹಿರಿಯರಾದ ಮನೋಹರ್ ರಾವ್ ಯು.ಬಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುದರ್ಶನ್ ಕನ್ಯಾಡಿ, ಅಭಿಯಾನದ ಪ್ರಮುಖರಾದ ಪ್ರೀತಮ್ ಧರ್ಮಸ್ಥಳ, ಭರತ್ ರಾವ್ ವೈಷ್ಣವಿ, ಪ್ರಭಾಕರ್ ಬೊಳ್ಮಾ,ನೀಲಕಂಠ ಶೆಟ್ಟಿ, ಧನಲಕ್ಷ್ಮೀ ಜನಾರ್ಧನ್,ನವೀನ್ ಸುವರ್ಣ,ಯತೀಶ್ ಸುವರ್ಣ,ಮನೀಶ್ ,ಅರುಣ್ ರಾವ್,ಶ್ರೇಯಸ್ ರಾವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಷ್ಠಾ ದಿನವಾದ ಜನವರಿ 22ರಂದು ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಬೆಳಿಗ್ಗೆ ಗಂಟೆ 9-30ರಿಂದ ಶ್ರೀ ರಾಮ ತಾರಕ ಜಪಯಜ್ಞ,ಅಯೋಧ್ಯೆಯ ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ಹಾಗೂ ಕ್ಷೇತ್ರದಲ್ಲಿ ವಿಶೇಷ ಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

Related posts

ಪ್ರವೀಣ್ ಮದ್ದಡ್ಕ ಫೇಸ್‌ಬುಕ್ ಖಾತೆಯಿಂದ ದಲಿತ ಜನಾಂಗವನ್ನು ಅವಮಾನಿಸಿ ಜಾತಿ ನಿಂದನೆ ಪೋಸ್ಟ್: ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘರ್ಷ ಸಮಿತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಶಿಬಾಜೆ ಗ್ರಾ.ಪಂನಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ವಿಶೇಷ ಗ್ರಾಮ ಸಭೆ

Suddi Udaya

ಪಡಂಗಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಕೊಕ್ಕಡ ಜೇಸಿಐ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂತೋಷ ಕುಮಾರ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಬೆಳ್ತಂಗಡಿ:ಕಾಂಗ್ರೆಸ್ ನಿಂದ ಸಂವಿಧಾನ ,ಪ್ರಜಾಪ್ರಭುತ್ವ ,ಶಿಷ್ಟಾಚಾರ ವಿರೋಧಿ ನಡವಳಿಕೆ. ರಾಜ್ಯದ ಮಂತ್ರಿಗಳ ಸರ್ವಾಧಿಕಾರಿ ಧೋರಣೆ, ಹಿರಿಯಕ್ಕನ ಚಾಳಿ ಮನೆ ಮಂದಿಗೆಂಬಂತೆ ಇದು ತಳಮಟ್ಟಕ್ಕೂ ತಲುಪುತ್ತಿದೆ: ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಆರೋಪ

Suddi Udaya
error: Content is protected !!