ಚಾರ್ಮಾಡಿ : ಇಲ್ಲಿಯ ಸರ್ಪಹಿತ್ಲು ನಾಗಬ್ರಹ್ಮ, ನಾಗಯಕ್ಷಿಣಿ ಹಾಗೂ ಶಿರಾಡಿ ದೈವ, ರುದ್ರಾಂಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.07 ಮತ್ತು ಜ.08 ರಂದು ಶ್ರೀ ಕ್ಷೇತ್ರ ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಪಾಧ್ಯಾಯರ ದಿವ್ಯ ಹಸ್ತದಿಂದ ನೆರವೇರಿತು.
ಜ.07 ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮವು ನಡೆದು, ಸಂಜೆ 7:00ಕ್ಕೆ ಸರಿಯಾಗಿ ಅವು ಕಾರ್ ಗುತ್ತಿನ ಮನೆಯಿಂದ ಕ್ಷೇತ್ರಕ್ಕೆ ಭಂಡಾರ ತರುವ ಮೂಲಕ ದೈವಗಳ ನೇಮೋತ್ಸವ ನಡೆಯಿತು. ಜ.08 ರಂದು ಮಧ್ಯಾಹ್ನ ನಾಗತಂಬಿಲ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.
ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಮಧುಸೂದನ್ ಭಟ್, ಅಧ್ಯಕ್ಷ ಕೊರಗಪ್ಪ ಗೌಡ, ಕಾರ್ಯದರ್ಶಿ ದಿವಿನೇಶ್ ಮೈಕಾನ್ ಹಾಗೂ ಸರ್ವಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.