ಬೆಳ್ತಂಗಡಿ : ಕಳಿಯ ಗೇರುಕಟ್ಟೆ ಕೊರಂಜ ಸರಕಾರಿ ಉನ್ನತೀಕರಿಸಿದ 140 ವರ್ಷಗಳ ಇತಿಹಾಸದ ಹಿರಿಯ ಪ್ರಾಥಮಿಕ ಶಾಲಾ ನೂತನ 2 ಕೊಠಡಿಗಳನ್ನು ಶಾಸಕ ಹರೀಶ್ ಪೂಂಜ ಜ.9 ರಂದು ಉದ್ಘಾಟಿಸಿ ಶುಭ ಹಾರೈಸಿದರು.
ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು ಜೊತೆಗಿದ್ದರು. ಕಳಿಯ ಗ್ರಾ.ಪಂ. ಅಧ್ಯಕ್ಷ ದಿವಾಕರ ಮೆದಿನ ಸಭಾ ಅಧ್ಯಕ್ಷ ವಹಿಸಿದ್ದರು. ಶಿಕ್ಷಣ ಸಮೂಹ ಸಮನ್ವಯಧಿಕಾರಿ ರಾಜೇಶ್ ಪಿ. ಮಾತನಾಡುತ್ತಾ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಮುದಾಯದ ಸಹಕಾರ ನೀಡುವ ಮೂಲಕ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗಲು ಸಾಧ್ಯ ಎಂದು ಹೇಳಿದರು.
ಬೆಳ್ತಂಗಡಿ ತಾಲೂಕು ಶಾಸಕ ಹರೀಶ್ ಪೂಂಜ ರವರ ರೂ. 28 ಲಕ್ಷ ಅನುದಾನದಲ್ಲಿ ನೂತನ 2 ಕೊಠಡಿಗಳ ನಿರ್ಮಾಣವಾಗಿದೆ. ಗುತ್ತಿಗೆದಾರ ಕೃಷ್ಣ ಕುಮಾರ್ ಕ್ಲಪ್ತ ಸಮಯದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಿಸಿ ಕೊಟ್ಟಿರುವುದಕ್ಕೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಕಳಿಯ ಗ್ರಾಮದ ಪಂಚಾಯತು ಸದಸ್ಯ ಹರೀಶ್ ಕುಮಾರ್ ಬಿ. ಮೆಚ್ಚುಗೆ ವ್ಯಕ್ತಪಡಿಸಿದರು. ಎ.ಕ್ಲಾಸ್ ಗುತ್ತಿಗೆದಾರ ಕೃಷ್ಣ ಕುಮಾರ್‌ರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಶಾಂತಾ ಎಸ್. ಪ್ರಸ್ತಾವಿಕವಾಗಿ ಮಾತನಾಡುತ್ತಾ 321 ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.
ಕಳಿಯ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಹಾಲಿ ಸದಸ್ಯೆ ಸುಭಾಷಿಣಿ ಜನಾರ್ದನ ಗೌಡ, ನಿಕಟ ಪೂರ್ವ ಉಪಾಧ್ಯಕ್ಷೆ ಹಾಲಿ ಸದಸ್ಯೆ ಕುಸುಮ ಎನ್.ಬಂಗೇರ, ಉಪಾಧಕ್ಷೆ ಇಂದಿರಾ ಬಿ.ಶೆಟ್ಟಿ, ಸದಸ್ಯರಾದ ಸುಧಾಕರ ಮಜಲು,ಮರೀಟಾ ಪಿಂಟೋ, ಶ್ವೇತಾ ಶ್ರೀನಿವಾಸ್, ವಿಜಯ ಕುಮಾರ್ ಕೆ, ನಿವೃತ್ತ ಪ್ರಾಂಶುಪಾಲರಾದ ದಿವಾಕರ ಆಚಾರ್ಯ, ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ, ಗೇರುಕಟ್ಟೆ ಪ್ರೌಢಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಪೂಜಾರಿ ಮೇರ್ಲ, ಕಳಿಯ ಸಿ.ಎ.ಬ್ಯಾಂಕ್ ನಿರ್ದೇಶಕ ಕೇಶವ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಅಮಿತಾ ಸ್ವಾಗತಿಸಿದರು., ಸಹಶಿಕ್ಷಕಿ ಅನುರಾಧಾ ಕಾರ್ಯಕ್ರಮ ನಿರೂಪಿಸಿ,ಶಿಬುಲ್ ಪಾಯಸ್ ವಂದಿಸಿದರು.