30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜ.14: ಆಮಂತ್ರಣ ಪರಿವಾರದ ಸಾರಥ್ಯದಲ್ಲಿ ಕುಣಿತ ಭಜನೆ

ಅಳದಂಗಡಿ : ಶ್ರೀ ಸೋಮನಾಥೇಶ್ವರೀ ಭಜನಾ ಮಂಡಳಿ, ಶ್ರೀ ಸತ್ಯದೇವತಾ ದೈವಸ್ಥಾನ ಅಳದಂಗಡಿ, ಸುರೇಶ್ ಪೂಜಾರಿ ಅಭಿಮಾನಿ ಬಳಗ ಸಹಕಾರದಲ್ಲಿ ಆಮಂತ್ರಣ ಪರಿವಾರದ ಸಾರಥ್ಯದಲ್ಲಿ ಜ.14 ರಂದು ಭಜನಾ ಸತ್ಸಂಗ
ರಾಮಕೃಷ್ಣ ಕಾಟುಕುಕ್ಕೆ ಸಂಗೀತಾ ಹಾಡಿನೊಂದಿಗೆ ಕುಣಿತ ಭಜನೆ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಎದುರು ಮೈದಾನದಲ್ಲಿ ಜರಗಲಿರುವುದು.

ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ದೀಪ ಪ್ರಜ್ವಲಿಸುವುದರೊಂದಿಗೆ ಮೈದಾನದಲ್ಲಿ
ಕುಣಿತ ಭಜನೆಯ ಉದ್ಘಾಟನೆಯನ್ನು ಅಳದಂಗಡಿ ಶ್ರೀ ಕ್ಲಿನಿಕ್ ನ ವೈದ್ಯರಾದ ಡಾ.ಎನ್.ಎಂ ತುಳುಪುಳೆ ನೆರವೇರಿಸಲಿದ್ದಾರೆ.

ಸಂಜೆ 7-30 ಕ್ಕೆ ನಡೆಯುವ ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಉದ್ಯಮಿಗಳಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಸುರೇಶ್ ಪೂಜಾರಿ ಮುಂಬಯಿ, ಹರೀಶ್ ಶೆಟ್ಟಿ ತುಮಕೂರು, ಶೇಖರ ದೇವಾಡಿಗ ಪಾಲಬೆ, ಪ್ರವೀಣ್ ಕುಮಾರ್ ಇಂದ್ರ, ಗೌತಮ್ ಜೈನ್ ಮೂಲ್ಕಿ ಅರಮನೆ, ಎಂ.ಗಂಗಾಧರ ಮಿತ್ತಮಾರು, ಉದ್ಯಮಿಗಳಾದ ಸುಂದರ ಹೆಗ್ಡೆ,ಕಲಾ ಪೋಷಕರಾದ ಬಿ.ಭುಜಬಲಿ ಧರ್ಮಸ್ಥಳ, ರಾಕೇಶ್ ಹೆಗ್ಡೆ ಬಳಂಜ, ಡಾ.ಶಶಿಧರ ಡೋಂಗ್ರೆ, ಪಿ.ಹೆಚ್.ಪ್ರಕಾಶ್ ಶೆಟ್ಟಿ ನೊಚ್ಚ,ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಸಂತೋಷ್ ಜೈನ್ ಬೆಳ್ತಂಗಡಿ, ಸದಾನಂದ ಆಚಾರ್ಯ ಸುಲ್ಕೇರಿ ಮೊಗ್ರು ಮುಂತಾದ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮೂಡಬಿದ್ರೆ ಪಿಂಗಾರ ಕಲಾವಿದರಿಂದ ಕದಂಬ ತುಳು ನಾಟಕ ನಡೆಯಲಿರುವುದು.

ಅಳದಂಗಡಿ ಅರಮನೆಯ ಶ್ರೀ ಶಿವಪ್ರಸಾದ್ ಅಜಿಲರು, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಹಾಗೂ ಸುಪ್ರೀತ್ ಜೈನ್, ಹರೀಶ್ ವೈ ಚಂದ್ರಮ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

Related posts

ಕಕ್ಕಿಂಜೆ: ಕತ್ತರಿಗುಡ್ಡೆ ನಿವಾಸಿ ಉಮರ್ ನಿಧನ

Suddi Udaya

ಮೇಲಂತಬೆಟ್ಟು : ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನಲ್ಲಿ ನಡೆದ ಘಟನೆ: ನದಿಯಲ್ಲಿ ಕಾಲು ಜಾರಿ ಬಿದ್ದು ನಾವೂರಿನ ಯುವಕ ಮನ್ಸೂರ್ ಮೃತ್ಯು

Suddi Udaya

ಬೆಳ್ತಂಗಡಿ ಸಂತ ಲಾರೆನ್ಸ್ ಚರ್ಚ್‌ನಲ್ಲಿ ಆತ್ಯಾಕರ್ಷವಾಗಿ ಗಮನ ಸೆಳೆದ ಗೋದಲಿ

Suddi Udaya

ಕೊಲ್ಲಿ ಶ್ರೀ ದುರ್ಗಾದೇವಿ ಸನ್ನಿಧಾನಕ್ಕೆ ಶಿಲಾಮಯ ಧ್ವಜಸ್ತಂಭ: ಕಿಲ್ಲೂರು ಪೇಟೆಯಿಂದ ಕಾಲ್ನಡಿಗೆಯ ಮೆರವಣಿಗೆ

Suddi Udaya

ನಡ: ಪುತ್ಯೆಯಲ್ಲಿ ಗುಡ್ಡ ಜರಿದು ಮನೆಗೆ ಹಾನಿ

Suddi Udaya
error: Content is protected !!