23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಮಡಂತ್ಯಾರು ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹಾಗೂ ವಿವಿಧ ಸಮಿತಿಯಿಂದ ಸತ್ಯ ನಾರಾಯಣ ಪೂಜೆ ಮತ್ತು ಪದಗ್ರಹಣ ಕಾರ್ಯಕ್ರಮ

ಮಡಂತ್ಯಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಮಡಂತ್ಯಾರು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಪಾರೆಂಕಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪಾರೆಂಕಿ, ಎ ಬಿ ಸಿ ಜನಜಾಗೃತಿ ಗ್ರಾಮ ಸಮಿತಿ ಪಾರೆಂಕಿ ಮತ್ತು ವಿಪತ್ತು ಶೌರ್ಯ ಘಟಕ ಮಡಂತ್ಯಾರು ಇದರ ಸoಯುಕ್ತ ಆಶ್ರಯದಲ್ಲಿ ಪಾರೆಂಕಿ ಮಹಿಷವರ್ಧಿನಿ ದೇವಸ್ಥಾನದ ವಠಾರದಲ್ಲಿ ಸತ್ಯ ನಾರಾಯಣ ಪೂಜೆ ಮತ್ತು ಪದಗ್ರಹಣ ಕಾರ್ಯಕ್ರಮ ನಡೆಯಿತು.

ಕ್ರಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯ ನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ರಾಮನ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಕಛೇರಿ ಯೋಜನಾಧಿಕಾರಿ ದಯಾನಂದ ಪೂಜಾರಿ, ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರ ಪದ್ಮನಾಭ ಸಾಲ್ಯಾನ್, ವಲಯ ಒಕ್ಕೂಟದ ಅಧ್ಯಕ್ಷ ಸತೀಶ್ ಆಚಾರ್ಯ, ಮತ್ತು ಪಾರೆಂಕಿ ಎ.ಬಿ.ಸಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಯರು ಭಾಗವಹಿಸಿದ್ದರು. ನಿರೂಪಣೆ ವಲಯ ಮೇಲ್ವಿಚಾರಕರು ವಸಂತ ಕುಮಾರ್ ಮಾಡಿದರು.

ಪಾರೆಂಕಿ ಬಿ ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ಹರಿಣಾಕ್ಷಿ ಸ್ವಾಗತಿಸಿದರು. ಪಾರೆಂಕಿ ಎ ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ಶೋಭಾಶ್ರೀ ವರದಿ ಮಂಡನೆ ಮಾಡಿದ್ದರು. ಪಾರೆಂಕಿ ಸಿ ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ಲೀಲಾವತಿ ಧನ್ಯವಾದವಿತ್ತರು.

Related posts

ಕಳೆಂಜ ಕ್ರಿಶ್ಚಿಯನ್ ಬ್ರದರ್‍ಸ್ ವತಿಯಿಂದ ಕಾಯರ್ತ್ತಡ್ಕ – ಶಿಬರಾಜೆ ರಸ್ತೆಯ ಶ್ರಮದಾನ

Suddi Udaya

ಬೆಳ್ತಂಗಡಿ: ಭುಡ್ಣಾರು ಶಕುಂತಲಾ ಶೆಟ್ಟಿ ನಿಧನ

Suddi Udaya

ವಾಣಿ ಶಿಕ್ಷಣ ಸಂಸ್ಥೆ: ಸ್ಕೌಟ್ ಮತ್ತು ಗೈಡ್ಸ್- ಬೇಸಿಗೆ ಶಿಬಿರ

Suddi Udaya

ವೇಣೂರು ದೇವಾಡಿಗರ ಸೇವಾ ವೇದಿಕೆಯಿಂದ ಪ್ರತಿಭಾ ಪುರಸ್ಕಾರ ಹಾಗೂ ಖಾಯಂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಒಕ್ಕಲಿಗ ಮುಖಂಡರಿಂದ ಆದಿಚುಂಚನಗಿರಿ ಶ್ರೀಗಳ ಭೇಟಿ

Suddi Udaya
error: Content is protected !!