ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಮಾಲೋಚನಾ ಸಭೆಯು ಜ.9ರಂದು ಮಂಗಳೂರಿನಲ್ಲಿ ನಡೆಯಿತು.
ಫೆಬ್ರವರಿ ತಾರೀಕು 25 ರಿಂದ 28 ರ ವರೆಗೆ ನಡೆಯುವ ಜಾತ್ರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಬೇಕಾದರೆ ಆಮಂತ್ರಣ ಪತ್ರಿಕೆಯನ್ನು ಪ್ರತಿಯೊಂದು ಕ್ಷೇತ್ರಕ್ಕೂ ಕಳುಹಿಸಿಕೊಡಬೇಕೆಂದು ತೀರ್ಮಾನಿಸಲಾಯಿತು.
ಇದೇ ಸಮಯದಲ್ಲಿ ಶೈಲೇಂದ್ರ ಸುವರ್ಣ ರವರನ್ನು ಜಾತ್ರೋತ್ಸವದ ಕಾರ್ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಂಕನಾಡಿ ಗರಡಿಯ ಮುಖ್ಯಸ್ಥ ಕೆ ಚಿತ್ತರಂಜನ್ ಕಂಕನಾಡಿ, ಆಡಳಿತ ಸಮಿತಿಯ ಅಧ್ಯಕ್ಷ ಪಿತಾಂಬರ ಹೆರಾಜೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ, ರಾಜಶೇಖರ್ ಕೋಟ್ಯಾನ್, ಎಸ್ ಆರ್ ಶೈಲೇಂದ್ರ ಸುವರ್ಣ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಪೂಜಾರಿ ಬಳೆಂಜ, ಎಂ ಜಯನಂದ ಪೂಜಾರಿ, ಸಂತೋಷ್ ಪೂಜಾರಿ ಉಗ್ಗೇಲ್ ಬೆಟ್ಟು, ಶ್ರೀಮತಿ ಶುಭ ರಾಜೇಂದ್ರ ಪೂಜಾರಿ, ಶ್ರೀ ಜಯರಾಮ ಪೂಜಾರಿ ಸುಳ್ಯ, ಜಯರಾಮ್ ಬಂಗೇರ ಬೆಳ್ತಂಗಡಿ, ಶ್ರೀಮತಿ ವಿದ್ಯಾ ರಾಕೇಶ್, ಶೇಖರ್ ಅಮೀನ್ ಮರೋಲಿ, ಹರೀಶ ಸನಿಲ್, ಮಂಗಳೂರು. ಪೃಥ್ವಿರಾಜ್ ಎಂ ಕಂಕನಾಡಿ, ವಿಶ್ವನಾಥ್ ಕುಂದರ್ ಶಕ್ತಿನಗರ, ಕುಸುಮಾಕರ್ ಕುಂಪಲ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಉಲ್ಲಾಸ್ ಕೋಟ್ಯಾನ್ ಸ್ವಾಗತಿಸಿ, ದೀಪಕ್ ಕೋಟ್ಯಾನ್ ಧನ್ಯವಾದವಿತ್ತರು.