September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು: ಬಟ್ಟೆ ಕಸೂತಿ ತಯಾರಿಕೆಯ ಆರಿ ವರ್ಕ್ ತರಬೇತಿಯ ಉದ್ಘಾಟನೆ

ಮಡಂತ್ಯಾರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ ಬ್ಯಾಂಕ್ ಆಫ್ ಬರೋಡ ಮಚ್ಚಿನ ಶಾಖೆ ಹಾಗೂ ಕರ್ನಾಟಕ ರಾಜ್ಯ ಟೈಲರ್ಸ್ ಒಕ್ಕೂಟ ಮಡಂತ್ಯಾರು ವಲಯ ಇವರ ಸಹಕಾರದಲ್ಲಿ 10 ದಿನಗಳ ಬಟ್ಟೆ ಕಸೂತಿ ತಯಾರಿಕೆಯ ಆರಿ ವರ್ಕ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಮಡಂತ್ಯಾರು ಶಿಶು ವಿಹಾರ ಮಹಿಳಾ ಮಂಡಲ ಕಟ್ಟಡ ಸಭಾಂಗಣದಲ್ಲಿ ಜ 10 ರಂದು ನಡೆಯಿತು .

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇಲ್ಲಿಯ ಕಾರ್ಯನಿರ್ವಾಣ ಅಧಿಕಾರಿ ಸಚಿನ್ ಹೆಗ್ಡೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವ ಉದ್ಯೋಗ ಮಾಡಲು ಸಹಕಾರಿ ಮಹಿಳೆಯರು ತರಬೇತಿ ಪಡೆಯುವುದರೊಂದಿಗೆ ಬ್ಯಾಂಕ್ ಸಾಲದ ಸೌಲಭ್ಯ ಪಡೆದು ಉದ್ಯಮದಲ್ಲಿ ಯಶಸ್ವಿಯಾಗಬೇಕು ಎಂದು ಕರೆ ನೀಡಿದರು ವೇದಿಕೆಯಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ವ್ಯವಸ್ಥಾಪಕರಾದ ಜೀವನ್ ಕೊಲ್ಯ, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ನವೀನ್, ಟೈಲರ್ ವಲಯದ ಅಧ್ಯಕ್ಷೆ ವಸಂತಿ ಲಕ್ಷ್ಮಣ್, ಬೆಳ್ತಂಗಡಿ ಕ್ಷೇತ್ರ ಸಮಿತಿ ಸದಸ್ಯರಾದ ಶಶಿಕಲ ಗೋಪಾಲ್ ಪುಂಜಾಲಕಟ್ಟೆ. ಮಹಿಳಾ ಮಂಡಲ (ರಿ) ಇದರ ಅಧ್ಯಕ್ಷೆ ಲೂಸಿ ಕಾರ್ಲೊ , ಮಡಂತ್ಯಾರು ವಲಯ ಸಮಿತಿ ಪದಾಧಿಕಾರಿಗಳು ತರಬೇತುದಾರರಾದ ಸುಮನಾ ಉಪಸ್ಥಿತರಿದ್ದರು .

ಸುಮಲತಾ ಕಾರ್ಯಕ್ರಮ ನಿರೂಪಣೆ ಮಾಡಿದರು ಒಟ್ಟು 28 ಮಹಿಳೆಯರು 10 ದಿವಸದ ತರಬೇತಿಯನ್ನು ಪಡೆಯಲಿದ್ದಾರೆ .

Related posts

ಬೆಳ್ತಂಗಡಿ ತಾಲೂಕಿನಲ್ಲಿ ನೈತಿಕ ಪೊಲೀಸ್ ಗಿರಿ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್‌ವೈಎಸ್ ಬೆಳ್ತಂಗಡಿ ಝೋನ್ ನಿಂದ ವೃತ ನಿರೀಕ್ಷಕರಿಗೆ ಮನವಿ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಕೆ. ಗಂಗಾಧರ ಗೌಡ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಚೆಸ್ ಪಂದ್ಯಾಟ ಉದ್ಘಾಟನೆ

Suddi Udaya

ಉರುವಾಲು: ಮಹಡಿಯ ಕಾರಿಡಾರ್‌ನಿಂದ ಆಯತಪ್ಪಿ ತೋಡಿಗೆ ಬಿದ್ದ ಕಾರ್ಮಿಕ ಮೃತ್ಯು

Suddi Udaya

ಅ.3-8: ಕೊಪ್ಪದಲ್ಲಿ 45ನೇ ಬೃಹತ್ ದಸರಾ ಯೋಗ ಕಾರ್ಯಕ್ರಮ, ಪೂರ್ವಭಾವಿ ಸಭೆ

Suddi Udaya

ಮಚ್ಚಿನ: ಸಂವಿಧಾನ ಜಾಗೃತಿ ಜಾಥ

Suddi Udaya
error: Content is protected !!