ಉಜಿರೆ: ಉಜಿರೆ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ ಕಳೆದ ಅಕ್ಟೋಬರ್ ನಲ್ಲಿ 5 ದಿನಗಳ ಕಾಲ ನಡೆದ 43 ನೇ ವರ್ಷದ ಶ್ರೀ ಶಾರದಾ ಪೂಜೋತ್ಸವವು ಎಲ್ಲರ ಪಾಲ್ಗೊಳ್ಳುವಿಕೆ ಹಾಗು ಸಹಕಾರದಿಂದ ಯಶಸ್ವಿಯಾಗಿ ,ಮಾದರಿ ಕಾರ್ಯಕ್ರಮವಾಗಿ ನಡೆದಿದ್ದು ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಹೃತ್ಪೂರ್ವಕ ಕೃ ತಜ್ಞತೆಗಳು ಹಾಗೂ ಮುಂದೆಯೂ ಎಲ್ಲರ ಸಹಕಾರದಿಂದ ಶ್ರೀ ಶಾರದಾ ಪೂಜೋತ್ಸವ ನಿರಂತರವಾಗಿ ನಡೆಯಲಿ ಎಂದು ಸಮಿತಿ ಗೌರವಾಧ್ಯಕ್ಷ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದ್ದಾರೆ.
ಅವರು ಜ 9ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆದ 43 ನೇ ವರ್ಷದ ಶ್ರೀ ಶಾರದಾ ಪೂಜೋತ್ಸವದ ಅವಲೋಕನ ಹಾಗು ಕೃತಜ್ಞತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ಮಾಧವ ಹೊಳ್ಳ, ಉಪಾಧ್ಯಕ್ಷರಾದ ಹುಕುಂ ರಾಮ್ ಪಟೇಲ್, ಲಕ್ಷ್ಮಣ ಸಪಲ್ಯ, ವನಿತಾ ವಿಶ್ವನಾಥ ಶೆಟ್ಟಿ ,ಕಾರ್ಯದರ್ಶಿ ಅಜೇಯ ಶೆಟ್ಟಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಶಿವಪ್ರಸಾದ್ ಸುರ್ಯ ಸಮಾರಂಭದ ಲೆಕ್ಕ ಪತ್ರ ಮಂಡಿಸಿ , ಅನುಮೋದಿಸಲಾಯಿತು.
ಮುಂದಿನ 44 ನೇ ವರ್ಷದ ಶ್ರೀ ಶಾರದಾ ಪೂಜಾ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿ ಅಧ್ಯಕ್ಷರಾಗಿ ಎನ್..ಮಾಧವ ಹೊಳ್ಳ, ಉಪಾಧ್ಯಕ್ಷರಾಗಿ ಹುಕುಂ ರಾಮ್ ಪಟೇಲ್, ಲಕ್ಷ್ಮಣ ಸಪಲ್ಯ, ಪ್ರಕಾಶ್ ಗೌಡ ಇಜ್ಜಲ, ವನಿತಾ ವಿಶ್ವನಾಥ ಶೆಟ್ಟಿ,ಕಾರ್ಯದರ್ಶಿಯಾಗಿ ಅಜೇಯ ಶೆಟ್ಟಿ,ಕೋಶಾಧಿಕಾರಿಯಾಗಿ ಶಿವಪ್ರಸಾದ್ ಸುರ್ಯ, ಜತೆ ಕಾರ್ಯದರ್ಶಿಯಾಗಿ ಕಿರಣ್ ರಾಜ್ ಅತ್ತಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗೋಪಾಲ ಕೃಷ್ಣ ಜಿ.ಕೆ. ಅವರನ್ನು ಸರ್ವಾನುಮತ ದಿಂದ ಆಯ್ಕೆ ಮಾಡಲಾಯಿತು.