22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಅಳದಂಗಡಿ: ಆಟೋ ರಿಕ್ಷಾ ಮತ್ತು ಬೈಕ್ ಅಪಘಾತ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಅಳದಂಗಡಿ: ಇಲ್ಲಿಯ ಗೋಳಿಯಂಗಡಿ ರಸ್ತೆಯಲ್ಲಿ ಆಟೋ ರಿಕ್ಷಾ ಮತ್ತು ಬೈಕ್‌ ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದ್ದು, ಜ.11ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಟ್ಟಡೆ ಗ್ರಾಮದ ಫೆಲಿಕ್ಸ್‌ ಅರುಣ್‌ ಪಾಯಸ್‌ (45ವ) ಎಂಬವರ ದೂರಿನಂತೆ, ಜ.02 ರಂದು ರಾತ್ರಿ ಬೆಳ್ತಂಗಡಿ ತಾಲೂಕು ನಿಟ್ಟಡೆ ಗ್ರಾಮದ ಪಾಲ್ದ್ರೋಡಿ ಎಂಬಲ್ಲಿ, ಗೊಳಿಯಂಗಡಿ ಅಳದಂಗಡಿ ರಸ್ತೆಯಲ್ಲಿ ಆಟೋ ರಿಕ್ಷಾ ನಂಬ್ರ: ಕೆಎ 70.6638 ನೇದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಫೆಲಿಕ್ಸ್‌ ಅರುಣ್‌ ಪಾಯಸ್‌ ಬಾಬ್ತು ಬೈಕ್‌ ನಂಬ್ರ: ಕೆಎ 21.ಹೆಚ್‌.7801 ನೇ ದಕ್ಕೆ ರಭಸದಿಂದ ಡಿಕ್ಕಿ ಹೊಡೆದು ಆಟೋ ರಿಕ್ಷಾಯೊಂದಿಗೆ ಪರಾರಿಯಾಗಿರುತ್ತಾನೆ. ಅಪಘಾತದ ಪರಿಣಾಮ ಬೈಕ್‌ ಸವಾರ ರಸ್ತೆಗೆ ಬಿದ್ದು ರಕ್ತಗಾಯವಾಗಿದ್ದು, ಉಜಿರೆ ಎಸ್‌ಡಿಎಂ ಆಸ್ಪತ್ರೆ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಜ. 11 ರಂದು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 03/2024 ಕಲಂ: 279,337 IPC & 134(A)(B) IMV Act ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕೊಕ್ಕಡ: ಉಪ್ಪಾರಪಳಿಕೆಯಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಪ್ರಾರಂಭೋತ್ಸವ

Suddi Udaya

ಕಲ್ಮಂಜ ನಿವಾಸಿ ರಘು ನಿಧನ

Suddi Udaya

ಕುಕ್ಕೇಡಿ: ಚಿರತೆ ದಾಳಿಗೆ ಹಸು ಬಲಿ

Suddi Udaya

ಕಳಿಯ ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಗೆ ಕೃಷಿಕರಿಂದ ಬಂದ ದೂರು ಅರ್ಜಿ: ಪಂಚಾಯತ್ ನಿಂದ ಸ್ಥಳ ಪರಿಶೀಲಿಸಿ ಇತ್ಯರ್ಥ

Suddi Udaya

ಶಿರ್ಲಾಲು ಆಟೋ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ನಿಧನ

Suddi Udaya

ನಾಳೆ(ಜೂ.12): ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ

Suddi Udaya
error: Content is protected !!