ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೂಸಿನ ಮನೆ ಶಿಶುಪಾಲನಾ ಕೇಂದ್ರದ ಉದ್ಘಾಟನಾ ಸಮಾರಂಭ ಜ.12 ರಂದು ನಡೆಯಿತು.
ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಾರದ ಕೂಸಿನ ಮನೆ ಉದ್ಘಾಟಿಸಿ ನರೇಗಾ ಕೆಲಸ ಮಾಡುವ ಮಹಿಳಾ ಕೂಲಿಕಾರರಿಗೆ ಈ ಕೂಸಿನ ಮನೆ ಸಹಕರಿಯಾಗಲಿದೆ. ಇದಕ್ಕಾಗಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯು ಶ್ರಮವಹಿಸಿದ್ದಾರೆ. ಹಾಗಾಗಿ ಕೂಸಿನ ಮನೆಯು ವ್ಯವಸ್ಥಿತವಾಗಿ ಸಜ್ಜುಗೊಂಡಿದೆ.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ನೀಲು ಮತ್ತು ಸರ್ವ ಸದಸ್ಯರು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೊರಗಪ್ಪ ಗೌಡ, ಬೆಳ್ತಂಗಡಿ ರೋಟರಿ ಕ್ಲಬ್ ನ ಪದಾಧಿಕಾರಿಗಳ ಪ್ರಕಾಶ್ ರಾವ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾದ ಪುರುಷೋತ್ತಮ್ ಜಿ, ಕಾರ್ಯದರ್ಶಿಯಾದ ಕುಂಞ ಕೆ. ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಸಂಜೀವ ಎಮ್.ಕೆ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ (ರಿ.)ದ.ಕ ಇದರ ಸಂಯೋಜಕರು ನಯನ ರೈ, ಸಂಸಾರ ಜೋಡುಮಾರ್ಗ ಸಂಯೋಜಕರು ಮೌನೀಶ್, ಸಿ.ಆರ್.ಟಿ ಸಂಯೋಜಕರು ಚಂದ್ರ ಮೌಲಿ, ತಾಲೂಕು ನರೇಗಾ ಐಇಸಿ ಸಂಯೋಜಕರು ಗ್ರಾ.ಪಂ ಸಿಬ್ಬಂದಿಗಳು,ಕೂಸಿನ ಮನೆ ಶಿಶುಪಾಲನ ಕೇಂದ್ರದ ಕೇರ್ ಟೇಕರ್ಸ್ ಗಳಾದ ಶ್ರೀಮತಿ ರೂಪಾ, ಶ್ರೀಮತಿ ನವ್ಯ ನರೇಗಾ ಮಹಿಳಾ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಚಾರ್ಮಾಡಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿ ಮಹಿಳಾ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಶ್ರೀಮತಿ ಭವ್ಯ ನಿರೂಪಿಸಿದರು. ಚಾರ್ಮಾಡಿ ಅಂಗನಾವಾಡಿ ಕಾರ್ಯಕರ್ತೆ ಸ್ವಾಗತಿಸಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ ವಂದಿಸಿದರು.