ಉಜಿರೆ: 2 ವರ್ಷದ ಮಗು ತನ್ನ ಕಾಲಿನ ಬಲ ಭಾಗದ ಪಾದ ವಕ್ರವಾಗಿರುವುದರಿಂದ ಸರಿಯಾಗಿ ನಡೆದಾಡಲು ಕಷ್ಟ ಪಡುತ್ತಿದ್ದು, ಚಿಕಿತ್ಸೆಗಾಗಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಬಂದಾಗ ಇಲ್ಲಿನ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ ಪ್ರತೀಕ್ಷ್. ಬಿ ಮಗುವನ್ನು ಪರೀಕ್ಷಿಸಿ ವಕ್ರ ಪಾದದ ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಬಗ್ಗೆ ಪೋಷಕರಿಗೆ ತಿಳಿಸಿದ್ದರು.
ಪಾದ ಮತ್ತು ಪಾದದ ಮಣಿಗಂಟು ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ, ಫೂಟ್ ಅಂಡ್ ಆಂಕ್ಲ್ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಡಾ ಪ್ರತೀಕ್ಷ್. ಬಿ ಇವರು ಮಗುವಿಗೆ ಪಾದದ ಶಸ್ತ್ರಚಿಕಿತ್ಸೆ ನಡೆಸಿದರು. ಡಾ| ಚೈತ್ರಾ ಆರ್ ಅರೆವಳಿಕೆ ತಜ್ಞರು ಸಹಕರಿಸಿದರು. ಪ್ರಸ್ತುತ ಮಗು ಪೋಷಕರ ಸಹಾಯದಿಂದ ನಡೆದಾಡಲು ಸಮರ್ಥವಾಗಿದೆ. ಮುಂದಿನ ದಿನಗಳಲ್ಲಿ ಅತೀ ಶೀಘ್ರದಲ್ಲಿ ಮಗು ಸ್ವತಂತ್ರವಾಗಿ ನಡೆದಾಡುತ್ತದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಮತ್ತು ಕೀಲು ವಿಭಾಗದಲ್ಲಿ 4 ಮಂದಿ ಶಸ್ತ್ರಚಿಕಿತ್ಸಾ ತಜ್ಞರಿದ್ದಾರೆ. ಟೋಟಲ್ ನೀ ರಿಪ್ಲೇಸ್‌ಮೆಂಟ್ ಹಾಗೂ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್ ಗಳಂತಹ ಹಲವಾರು ಶಸ್ತ್ರಚಿಕಿತ್ಸೆಯನ್ನು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಇವರ ಪ್ರೋತ್ಸಾಹದಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದು ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.