ಕಾರ್ಯತ್ತಡ್ಕ : ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಕಾರ್ಯತ್ತಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮಾದಿನಾಚರಣೆಯನ್ನು ಜ.12 ರಂದು ಆಚರಿಸಲಾಯಿತು.
ಪ್ರೌಢ ಶಾಲಾ ಮಕ್ಕಳಿಗೆ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಜೆಸಿಐ ಕೊಕ್ಕಡ ಕಪಿಲ ವತಿಯಿಂದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು .
ಸಭಾಕಾರ್ಯಕ್ರಮದಲ್ಲಿ ಜೇಸಿಐ ಅಧ್ಯಕ್ಷ ಹೆಚ್.ಜಿಎಫ್ ಸಂತೋಷ್ ಜೈನ್, ಸಂಪನ್ಮೂಲ ವ್ಯಕ್ತಿ ವಿನಾಯಕ ಜೋಶಿ, ನಿಕಟಪೂರ್ವ ಅಧ್ಯಕ್ಷ ಜೆಸಿಐ ಸೀನಿಯರ್ ಜೀತೇಶ್ ಪಿರೇರಾ, ಯೋಜನಾ ನಿರ್ದೇಶಕ ಜೆ.ಎಫ್ .ಎಮ್. ಶ್ರೀಧರ ರಾವ್, ಜೂನಿಯರ್ ಜೆಸಿ ಅಧ್ಯಕ್ಷ ಜೆಸಿ ಹರ್ಷಿತ್ ಗೌಡ , ಕಾರ್ಯದರ್ಶಿ ಜೆಸಿ ಅಕ್ಷತ್ ರೈ, ಉಪಸ್ಥಿತರಿದ್ದರು.
ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಕನ್ನಡ ಪಂಡಿತರಾದ ವಿನಾಯಕ ಜೋಶಿಯವರು ಸ್ವಾಮಿ ವಿವೇಕಾನಂದರ ಆದರ್ಶಗಳ ಬಗ್ಗೆ ತೀಳಿ ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಮತ್ತು ಶಾಲಾ ಮಕ್ಕಳು , ಜೆಸಿ ಹೆಚ್.ಜಿಎಫ್ ಜೋಸೆಫ್ ಪಿರೇರಾ, ಜೆಸಿ ಹೆಚ್.ಜಿಎಫ್ ಜೇಸಿಂತಾ ಡಿಸೋಜ, ಮತ್ತು ಜೆಸಿ ರಾಜಾರಾಮ ಟಿ., ಉಪಸ್ಥಿತರಿದ್ದರು.
ಜೆಸಿ ಸಂತೋಷ್ ಜೈನ್ ಸ್ವಾಗತಿಸಿ, ಶ್ರೀಧರ್ ರಾವ್ ಜೇಸಿವಾಣಿ ವಾಚಿಸಿದರು. ಜೆಸಿ ಅಕ್ಷತ್ ರೈ ವಂದಿಸಿದರು.