23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೃತಜ್ಞತಾ ಸಮಾರಂಭ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ವಾಣಿ ಕಾಲೇಜಿನಲ್ಲಿ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೃತಜ್ಞತಾ ಸಭೆ ಮತ್ತು ಡಾ. ಅಮೃತ ಸೋಮೇಶ್ವರರವರಿಗೆ ನುಡಿ ನಮನ ಕಾರ್ಯಕ್ರಮ ಜರಗಿತು.


ಸಭೆಯ ಆರಂಭಕ್ಕೆ ಮೌನ ಪ್ರಾರ್ಥನೆ ನಡೆಸಿ ಡಾ. ಅಮೃತ ಸೋಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಣೆಯೊಂದಿಗೆ ಡಾ. ಅಮೃತರ ಬಗ್ಗೆ ಉಜಿರೆ ಶ್ರೀಧ ಮ ಕಾಲೇಜಿನ ಉಪನ್ಯಾಸಕರಾದ ಡಾ. ದಿವ ಕೊಕ್ಕಡರವರು ಮಾತನಾಡುತ್ತಾ, ಅಮೃತರು ಸದ್ದು ಮಾಡುವ ಸ್ವಭಾವದವರಲ್ಲ. ಪ್ರಶಸ್ತಿ ಗೌರವಗಳನ್ನು ಅರಸಿದವರೂ ಅಲ್ಲ. ಆದರೆ ಕೀರ್ತಿ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಅವರ ವಿಚಾರಗಳು, ಬರಹಗಳು ವಿಶ್ವ ಮಾದರಿ. ಅವರು ನಂಬಿದ, ಬೆಳೆಸಿದ ಜೀವನ ಮೌಲ್ಯಗಳು ಎಂದೂ ಮೃತವಾಗದ ಅಮೃತ ವಚನಗಳಾಗಿವೆ ಎಂದು ಹೇಳಿದರು.

ನಂತರ ಸಾಹಿತ್ಯ ಸಮ್ಮೇಳನದ ಬಗ್ಗೆ ಧರಣೇಂದ್ರ ಕೆ ಜೈನ್, ಸಂಯೋಜನ ಸಮಿತಿಯ ಅಧ್ಯಕ್ಷರಾದ ಜಯಾನಂದ ಗೌಡರವರು ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೂರ್ಣಕಾಲಿಕವಾಗಿ ಮುದ್ರಣಗೊಂಡ ಚಾರುಮುಡಿ ನೆನಪಿನ ಸಂಚಿಕೆಯನ್ನು ಸಮ್ಮೇಳನದ ಸರ್ವಾಧ್ಯಕ್ಷರಾದ ಎ. ಕೃಷ್ಣಪ್ಪ ಪೂಜಾರಿಯವರು ಬಿಡುಗಡೆಗೊಳಿಸಿ, ದೈವಾನುಗ್ರಹ ಮತ್ತು ಸಂಕಲ್ಪ ಶುದ್ಧಿ ಇದ್ದರೆ ಜೀವನದಲ್ಲಿ ಯಶಸ್ಸು ತಾನಾಗಿಯೆ ಒದಗಿಬರುತ್ತದೆ. ಅದಕ್ಕೆ ಬೆಳ್ತಂಗಡಿ ತಾಲೂಕಿನ 18ನೆಯ ಕನ್ನಡ ಸಾಹಿತ್ಯ ಸಮ್ಮೇಳನವೆ ಸಾಕ್ಷಿ ಎಂದು ಅಭಿಪ್ರಾಯ ಪಟ್ಟು, ಸಮ್ಮೇಳನದ ಯಶಸ್ಸಿನಲ್ಲಿ ಭಾಗಿಗಳಾದ ಸರ್ವರನ್ನೂ ಅಭಿನಂದಿಸಿ ಮಾತನಾಡಿದರು.


ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಯದುಪತಿ ಗೌಡರು ಸಮ್ಮೇಳನದ ಅರ್ಥಪೂರ್ಣ ಆಯೋಜನೆಯಲ್ಲಿ ಭಾಗಿಗಳಾದ ಎಲ್ಲರಿಗೂ ಪರಿಷತ್ತಿನ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಸಂಪತ್ ಬಿ ಸುವರ್ಣ ಬೆಳ್ತಂಗಡಿ, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಪ್ರಮೀಳಾರವರು ಉಪಸ್ಥಿತರಿದ್ದರು.

ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು ಸ್ವಾಗತಿಸಿದರು, ಸಂಯೋಜನ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡರವರು ವಂದಿಸಿದರು. ಸಮ್ಮೇಳನದ ಕೋಶಾಧ್ಯಕ್ಷರು ಸಮ್ಮೇಳನದ ಲೆಕ್ಕ ಪತ್ರ ಮಂಡಿಸಿದರು. ಉಪನ್ಯಾಸಕರಾದ ಬೆಳ್ಳಿಯಪ್ಪ ರವರು ಕಾರ್ಯಕ್ರಮ ನಿರೂಪಿಸಿದರು.

Related posts

ಅರಸಿನಮಕ್ಕಿ: ಬರಮೇಲು ನಿವಾಸಿ ನಾಗಮ್ಮ ನಿಧನ

Suddi Udaya

ಬೆಳಾಲು : ಪಿಯುಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು

Suddi Udaya

ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷರಾಗಿ ಶುಭಕರ್ ಪೂಜಾರಿ, ಕಾರ್ಯದರ್ಶಿಯಾಗಿ ರಕ್ಷಿತ್ ಬಂಗೇರ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅನ್ನಛತ್ರದಲ್ಲಿ ಹಾಲು ಉಕ್ಕಿಸುವ ಕಾರ್ಯ

Suddi Udaya

ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹತೆಗೊಳಿಸಿರುವುದಕ್ಕೆ ಖಂಡನೆ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮೌನ ಪ್ರತಿಭಟನೆ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ 27ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!