24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಡ: ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

ನಡ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ನಿರ್ದೇಶನದಂತೆ ನಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕದ ವತಿಯಿಂದ ಜ.12ರಂದು ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು.

ರೇಂಜರ್ಸ್ ವಿದ್ಯಾರ್ಥಿನಿಯರಿಗೆ ರಸ ಪ್ರಶ್ನೆ ಸ್ಪರ್ಧೆ ಹಾಗೂ ಏಕಾಗ್ರತೆ ಪರೀಕ್ಷಣಾ ಸ್ಪರ್ಧೆಗಳನ್ನು ನಡೆಸಲಾಯಿತು.

ರೇಂಜರ್ ಲೀಡರ್ ವಸಂತಿ ಪಿ. ರವರು ವಿವೇಕಾನಂದರ ತ್ಯಾಗ ಸೇವೆಗಳನ್ನು ಉದಾಹರಣೆ ಸಹಿತ ವಿವರಿಸಿ, ಅವರ ಆದರ್ಶಗಳನ್ನು ಅನುಸರಿಸುವಂತೆ ಕರೆ ನೀಡಿದರು. ಅಸ್ಮಿತಾ ಹಾಗೂ ಯಕ್ಷಿತಾ ವಿವೇಕಾನಂದರ ಬಗ್ಗೆ ಮಾತನಾಡಿದರು.

ನಿಕಿತಾ ಸ್ವಾಗತಿಸಿದರು. ಸುದೀಕ್ಷಾ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರು ಸಹಕರಿಸಿದರು. ಪ್ರಾಂಶುಪಾಲ ಚಂದ್ರಶೇಖರ್ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

Related posts

ಬೆಳ್ತಂಗಡಿ:ಮಹಿಳಾ ವೃಂದದ ನೂತನ ಕಟ್ಟಡ ಉದ್ಘಾಟನೆ

Suddi Udaya

ಓಡಿಲ್ನಾಳ ಉ.ಹಿ.ಪ್ರಾ. ಶಾಲೆಗೆ ಪದವೀಧರ ಪ್ರಾಥಮಿಕ ಶಿಕ್ಷಕಿಯಾಗಿ ಅಕ್ಷತಾ ಯಶೋಧರ ಶೆಟ್ಟಿ ಆಯ್ಕೆ

Suddi Udaya

ಹರಿಯಾಣದಲ್ಲಿ ನಡೆಯುವ ಗೋಲ್ಡನ್ ಆರೋ ರ್‍ಯಾಲಿಗೆ ಬೆಳ್ತಂಗಡಿಯ ಸೇವಂತಿ, ದ್ವಿಶಾ ಆಯ್ಕೆ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಬಂದಾರು: ಬಟ್ಲಡ್ಕ, ಬೀಬಿ ಮಜಲು ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ‘ಗಝಲ್ ‘ ಸ್ಪರ್ಧೆ: ಮಚ್ಚಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಯಜ್ನೇಶ್ ಪ್ರಥಮ ಸ್ಥಾನ

Suddi Udaya
error: Content is protected !!