ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ರಾಷ್ಟ್ರೀಯ ಯುವ ದಿನ ಆಚರಣೆ ಮತ್ತು ಎನ್. ಎಸ್ ಎಸ್ ಕಾರ್ಯಕ್ರಮ ವಾರ್ಷಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಕೀಲರು ಮತ್ತು ವಾಣಿ ಪದವಿ ಪೂರ್ವ ಕಾಲೇಜಿನ ಹಿರಿಯ ಎನ್. ಎಸ್. ಎಸ್ ಸ್ವಯಂಸೇವಕ ಪೃಥ್ವಿಶ್ ಧರ್ಮಸ್ಥಳ ಪಾಲ್ಗೊಂಡು ವಿವೇಕಾನಂದರ ಆದರ್ಶಗಳು ಇಂದಿನ ದಿನಕ್ಕೆ ಮಾತ್ರ ಮೀಸಲಾಗದೆ ವಿದ್ಯಾರ್ಥಿಗಳು ಮೈಗುಡಿಸಿಕೊಳ್ಳಬೇಕು ಮತ್ತು ಎನ್. ಎಸ್ ಎಸ್ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮಾತ್ರ ಅದರ ಮಹತ್ವ ತಿಳಿಯುವುದು ಎಂದು ಎನ್. ಎಸ್ ಎಸ್ ಸ್ವಯಂಸೇವಕರಿಗೆ ತಿಳಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .
ಕಾಲೇಜಿನ ಉಪ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಶಂಕರ್ ರಾವ್, ಸಹ ಕಾರ್ಯಕ್ರಮ ಅಧಿಕಾರಿಗಳಾದ ಕುಮಾರಿ ಕಾಮಾಕ್ಷಿ ಮತ್ತು ಕುಮಾರಿ ಲತಾಶ್ರೀ ಘಟಕ ನಾಯಕರುಗಳಾದ ಗೌತಮ್ ಮತ್ತು ಸನುಷ ಪಿಂಟೋ ಉಪಸ್ಥಿತರಿದ್ದರು.
ಎನ್. ಎಸ್ ಎಸ್ , ವಿದ್ಯಾರ್ಥಿನಿ ಅನ್ವಿತಾ ಸ್ವಾಗತಿಸಿ ಸಾಹಿತ್ಯ ಧನ್ಯವಾದವಿತ್ತರು ಮತ್ತು ಅನುಕ್ಷ ಕಾರ್ಯಕ್ರಮ ನಿರೂಪಿಸಿದರು.