September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ರಸ್ತೆ ಬದಿ ನಿಂತಿದ್ದ ಮಹಿಳೆಗೆ ವ್ಯಾಗನರ್ ಡಿಕ್ಕಿ: ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಅವರ ಪತ್ನಿ ಅಂಜಲಿ ನಾಯಕ್ ಗಂಭೀರ ಗಾಯ : ಮಂಗಳೂರು ಆಸ್ಪತ್ರೆಗೆ ದಾಖಲು

ಗುರುವಾಯನಕೆರೆ: ಇಲ್ಲಿಯ ಅರೆಮಲೆಬೆಟ್ಟ ದ್ವಾರದ ಬಳಿ ರಸ್ತೆ ಬದಿ ನಿಂತಿದ್ದ ಮಹಿಳೆಗೆ ವ್ಯಾಗನರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಜ.13 ರಂದು ಬೆಳಗ್ಗೆ ನಡೆದಿದೆ.
ಅರೆಮಲೆಬೆಟ್ಟು ದ್ವಾರದ ಎದುರಿನ ನಿವಾಸಿ, ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಅವರ ಪತ್ನಿ ಶ್ರೀಮತಿ ಅಂಜಲಿ ನಾಯಕ್ ಅವರು ಕಾಲಿಗೆ ಗಂಭೀರ ಏಟು ತಗಲಿದ್ದು, ಅವರನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಗೋಪಿನಾಥ ನಾಯಕ್ ಅವರು ಗುರುವಾಯನಕೆರೆಯಲ್ಲಿ ಅಂಗಡಿಯನ್ನು ಹೊಂದಿದ್ದು, ಅವರ ಪತ್ನಿ ಬೆಳಿಗ್ಗೆ ಅಂಗಡಿಗೆ ಹೋಗಲು ರಸ್ತೆ ಬದಿ ನಿಂತಿದ್ದಾಗ ಶಕ್ತಿನಗರ ಕಡೆಯಿಂದ ಗುರುವಾಯನಕೆರೆ ಕಡೆಗೆ
ವೇಗವಾಗಿ ಬಂದ ವ್ಯಾಗನರ್ ಅವರಿಗೆ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಓಮಿನಿ ವ್ಯಾನ್ ಗೆ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿಯಿಂದ ಕುಸಿದು ಬಿದ್ದ‌ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಗುರುವಾಯನಕೆರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನೆ

Suddi Udaya

ಉಜಿರೆ ಶ್ರೀ ಧ.ಮಂ. ಅ. ಸೆಕೆಂಡರಿ ಶಾಲೆಯಲ್ಲಿ ಸಂಭ್ರಮದ ‘ಪ್ರಾರಂಭೋತ್ಸವ’

Suddi Udaya

ನಿಯಂತ್ರಣ ತಪ್ಪಿ ಆಪೆ ರಿಕ್ಷಾ ಪಲ್ಟಿ: ಪ್ರಯಾಣಿಕರಿಗೆ ಗಾಯ

Suddi Udaya

ಸೇಕ್ರೆಡ್ ಹಾರ್ಟ್ ಚರ್ಚ್ ನ ನೂತನ ಪ್ರಧಾನ ಧರ್ಮ ಗುರು ವಂದನೀಯ ಸ್ಟ್ಯಾನಿ ಗೋವಿಯಸ್ ರಿಗೆ ಮಡಂತ್ಯಾರು ನಾಗರಿಕರ ಪರವಾಗಿ ಸ್ವಾಗತ

Suddi Udaya

ಉಜಿರೆ: ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ, ಪರಿಶೀಲನೆ

Suddi Udaya

ಬೆಳ್ತಂಗಡಿಯಲ್ಲಿ ಮಳೆ ಅವಾಂತರ, ವೇಣೂರಿನಲ್ಲಿ ಧರೆ ಕುಸಿತ, ಹಲವು ಕಾರುಗಳಿಗೆ ಹಾನಿ

Suddi Udaya
error: Content is protected !!