25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಜಯವಿಕ್ರಮ್ ಕಲ್ಲಾಪು

ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ೨೦೨೨-೨೩ ನೇ ಸಾಲಿನಸಂಘದ ನೂತನ ಅಧ್ಯಕ್ಷರಾಗಿ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ್ ಕಲ್ಲಾಪು, ಉಪಾಧ್ಯಕ್ಷರಾಗಿ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸುಂದರ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.

ಜ.13ರಂದು ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಸಂಘದ ನೂತನ ನಿರ್ದೇಶಕರುಗಳಾಗಿ ವಿಶ್ವನಾಥ ಕೋಟ್ಯಾನ್ ಗುಂಡೂರಿ , ನಾರಾಯಣ ಪೂಜಾರಿ ಉಚ್ಚೂರು, ಪ್ರಶಾಂತ್ ಕೊಕ್ರಾಡಿ, ನಿತೀಶ್ ಎಚ್.,ಕುಕ್ಕೆಡಿ, ರವೀಂದ್ರ ಬಿ. ಅಮೀನ್ ಬಳಂಜ, ಸಂಜೀವ ಪೂಜಾರಿ ಕೊಡಂಗೆ, ಜಯ ಕುಮಾರ್ ನಡ, ಗುರುರಾಜ ಗುರಿಪಳ್ಳ, ಚಂದ್ರಶೇಖರ ಪೂಜಾರಿ ಇಂದಬೆಟ್ಟು, ನಮಿತಾ ತೋಟತ್ತಾಡಿ, ಸಂತೋಷ ಕೆ. ಸಿ., ಸುನೀಲ್ ಕನ್ಯಾಡಿ, ಸಂತೋಷ ಉಪ್ಪಾರು ಬೆಳಾಲು, ರೂಪೇಶ್ ಧರ್ಮಸ್ಥಳ, ವಿನೋದಿನಿ ರಾಮಪ್ಪ, ಪ್ರಮೋದ್ ಮಚ್ಚಿನ, ಅನೂಪ್ ಬಂಗೇರ, ಉಷಾ ಶರತ್, ಕರುಣಾಕರ ರೆಂಕೆದಗುತ್ತು, ನಾಮ ನಿರ್ದೇಶಕ ನಿರ್ದೇಶಕರುಗಳಾಗಿ ಗುಣಕರ ಅಗ್ನಾಡಿ, ಹರಿದಾಸ್ ಕೇದೆ, ಕಮಲಾಕ್ಷ ಬೆಳ್ತಂಗಡಿ, ತರುಷ್ ಹೇರಾಜೆ, ರಾಜಶ್ರೀ ರಮಣ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷ ಮಾಜಿ ಶಾಸಕ ಕೆ. ವಸಂತ ಬಂಗೇರ ಆಯ್ಕೆಯನ್ನು ಘೋಷಣೆ ಮಾಡಿದರು, ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಎಂ. ಕೆ. ಪ್ರಸಾದ್ ಶಿರ್ಲಾಲು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆಯಾಗಿ ಸುಮತಿ ಪ್ರಮೋದ್, ಚುನಾವಣಾಧಿಕಾರಿಯಾಗಿ ಗುರುದೇವ ವಿವಿದೊದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಶ್ವಥ್ ಕುಮಾರ್ ಪ್ರಕ್ರಿಯೆ ನಡೆಸಿದರು. ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ಸದಸ್ಯರು ಹಾಜರಿದ್ದರು

Related posts

ನಾಳೆ(ನ.22): ಉಜಿರೆ-ಪೆರಿಯಶಾಂತಿ ಸ್ಪರ್ ರಸ್ತೆ ಕಾಮಗಾರಿಗೆ ಶಿಲಾನ್ಯಾಸ: ಧರ್ಮಸ್ಥಳದಲ್ಲಿ ಬೆಂಗಳೂರು ಮಾದರಿಯ ಅಂಡರ್ ಪಾಸ್ ನಿರ್ಮಾಣ

Suddi Udaya

ಅರಸಿನಮಕ್ಕಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಚತಾ ಅಭಿಯಾನ

Suddi Udaya

ಕಳೆಂಜ: ನಡುಜರು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರಾಜೇಶ್ ಎಮ್.ಕೆ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಒಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

Suddi Udaya

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 13504 ಅಂತರದಿಂದ ಮುನ್ನಡೆ

Suddi Udaya
error: Content is protected !!