24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬದ್ಯಾರಿನಲ್ಲಿ ನೂತನವಾಗಿ ನಿರ್ಮಿಸಿದ ದಿ| ಬಿ. ಲಕ್ಕಣ್ಣ ಶೆಟ್ಟಿ ಸ್ಮಾರಕ ಸಾರ್ವಜನಿಕ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ತೆಂಕಕಾರಂದೂರು:ಗುರುವಾಯನಕೆರೆ -ಅಳದಂಗಡಿ ಮಾರ್ಗದ ಬದ್ಯಾರಿನಲ್ಲಿ ನೂತನವಾಗಿ ನಿರ್ಮಿಸಿದ ದಿ| ಬಿ. ಲಕ್ಕಣ್ಣ ಶೆಟ್ಟಿ ಸ್ಮಾರಕವಾಗಿ ಸಾರ್ವಜನಿಕ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ ಕಾರ್ಯಕ್ರಮವು ಜ.14ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೇರವೇರಿಸಿ ಶುಭ ಕೋರಿದರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ್ ಸಿಂಹ ನಾಯಕ್ ,ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಲ| ಎಂ.ಜಿ ಶೆಟ್ಟಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಉಮೇಶ್ ಶೆಟ್ಟಿ,ಲಯನ್ ಪ್ರಾಂತೀಯ ಅಧ್ಯಕ್ಷ ಹೆರಾಲ್ಡ್ ತ್ರಾವೊ ಉಪಸ್ಥಿತರಿದ್ದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ನವೀನ್ ಕೆ ಸಾಮಾನಿ,ಕಿರಣ್ ಶೆಟ್ಟಿ ಬೆಳ್ತಂಗಡಿ, ಸಂತೋಷ್ ಹೆಗ್ಡೆ ಕಟ್ಟೆ, ಸತೀಶ್ ಹೆಗ್ಡೆ ಕಟ್ಟೆ, ಡಾ‌.ಶಶಿಧರ ಡೋಂಗ್ರೆ,ಸುರೇಶ್ ಶೆಟ್ಟಿ ಲಾಯಿಲ,ಹೇಮಶಂಕರ್ ಶೆಟ್ಟಿ ಬೆಳ್ತಂಗಡಿ, ಪುಷ್ಪರಾಜ್ ಶೆಟ್ಟಿ ಬೆಳ್ತಂಗಡಿ, ವಸಂತ ಶೆಟ್ಟಿ ಶ್ರದ್ದಾ,ರಾಜು ಶೆಟ್ಟಿ ಬೆಂಗೆತ್ಯಾರು,ಉದಯ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ನೇಸರ ಹಾಗೂ ಇತರರು ಉಪಸ್ಥಿತರಿದ್ದರು.

ಶ್ರೀಮತಿ ಮತ್ತು ದೇವದಾಸ್ ಶೆಟ್ಟಿ ಆಗಮಿಸಿದ ಆತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು. ಶಿಕ್ಷಕ ಧರಣೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಲ/ ಉಮೇಶ್ ಶೆಟ್ಟಿ ವಂದಿಸಿದರು.

Related posts

ಸರಕಾರವು ಇಲಾಖೆಯನ್ನು ರಾಜಕೀಯಕರಣಗೊಳಿಸುತ್ತಿದೆ: ರಾಜ್ಯದ ಭವಿಷ್ಯವನ್ನು ನಿರ್ಣಯಿಸುವ ಶಿಕ್ಷಣ ಕ್ಷೇತ್ರದಲ್ಲಿ, ಯಾರ ಅಭಿಪ್ರಾಯವನ್ನೂ ಪಡೆಯದೆ ಬದಲಾವಣೆ ಮಾಡುತ್ತಿರುವುದು ಆಘಾತಕಾರಿ: ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಆಕ್ಷೇಪ

Suddi Udaya

ಕಲ್ಮಂಜ ಮಿಯಾ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಮನೆಯಿಂದ ದರೋಡೆ ಪ್ರಕರಣ : ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಬಜಿರೆ ಹಿ.ಪ್ರಾ. ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ರೆಖ್ಯ: ನಾಪತ್ತೆಯಾಗಿದ್ದ ಉರ್ನಡ್ಕ ನಿವಾಸಿ ಲೋಕೇಶ್ ರವರ ಮೃತದೇಹ ಪತ್ತೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕೆ.ಡಿ.ಪಿ ಸದಸ್ಯರ ನೇಮಕ

Suddi Udaya
error: Content is protected !!