April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಮಂಗಲೋತ್ಸವ ಹಾಗೂ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

ಪಡಂಗಡಿ; ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಹಾಲಿಂಗೇಶ್ವರ ದೇವರು 15 ಭಜನಾ ತಂಡಗಳ ಮೂಲಕ ಭಜನೆಯೊಂದಿಗೆ ಲೋಕ ಸಂಚಾರ ನಡೆದು ಜ 14 ರಂದು ದೇವಸ್ಥಾನದಲ್ಲಿ ಭಜನಾ ಮಂಗಲೋತ್ಸವ ಕಾರ್ಯಕ್ರಮ ನಡೆದು ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ ಭಟ್ ಮಠ ಅವರ ಉಪಸ್ಥಿತಿಯಲ್ಲಿ ರಾಘವೇಂದ್ರ ಭಟ್ ಮಠ ದೇವರನ್ನು ಬರಮಾಡಿಕೊಂಡರು ಹಾಗೂ ಕುವೆಟ್ಟು.ಓಡಿಲ್ನಾಳ. ಪಡಂಗಡಿ.ಸೊಣಂದೂರು ಗ್ರಾಮದ ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಜರಗಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್., ಮಾಜಿ ಶಾಸಕ ಕೆ ವಸಂತ ಬಂಗೇರ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಶಶೀಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ‌, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಪಡಂಗಡಿ, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ. ಕೋಶಾದಿಕಾರಿ ವಸಂತ ಗೌಡ ವರಕಬೆ ಹಾಗೂ ಪಧಾದಿಕಾರಿಗಳು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.

Related posts

ಹಳೆಕೋಟೆ ಮನೆಯಲ್ಲಿ ನಡೆದ ಬಂಗೇರರ ಅಂತಿಮ ವಿಧಿ-ವಿಧಾನ: ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶಕ್ಕೆ ಅವಕಾಶ: ವರ್ತಕರಿಂದ ಅಂಗಡಿ-ಮುಂಗಟ್ಟು ಬಂದ್ ಮಾಡಿ ಗೌರವ

Suddi Udaya

ಲಾಯಿಲ: ಗುರು ರಾಘವೇಂದ್ರ ಸ್ವಾಮಿಯ ಮಠದಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಸ್ವಚ್ಛತಾ ಕಾರ್ಯ

Suddi Udaya

ತುಳು ಲಿಪಿ ಆನ್-ಲೈನ್ ಪರೀಕ್ಷೆ: ಪಂಚಮಿ ಬಿ.ಆರ್ ಶತಃ ಪ್ರತಿಶತ ಸಾಧನೆ

Suddi Udaya

ಓಡಿಲ್ನಾಳ: ಶ್ರೀ ಕ್ಷೇತ್ರ ನಾಗಚಾವಡಿಗೆ ಭಕ್ತರಿಂದ ಹರಿದು ಬಂದ ಹಸಿರುವಾಣಿ ಹೊರೆಕಾಣಿಕೆ; ವೈಭವದ ಮೆರವಣಿಗೆ, ಮೆರಗು ತಂದ ಕುಣಿತ ಭಜನೆ

Suddi Udaya

ಇಂದಬೆಟ್ಟು ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆ

Suddi Udaya

ನೆರಿಯ: ಹಿರಿಯ ದೈವ ನರ್ತಕ ತನಿಯಪ್ಪ ನಲಿಕೆ ನಿಧನ

Suddi Udaya
error: Content is protected !!