September 6, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸರಕಾರಿ ಪ್ರೌಢಶಾಲೆ ನಡದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆ:ಪೋಷಕರೇ ತಮ್ಮ ಮಕ್ಕಳಿಗೆ ಶಿಕ್ಷಕರಾಗಿ ಬೋಧನೆ

ಬೆಳ್ತಂಗಡಿ : ಜ 14ರಂದು ಶುಕ್ರವಾರ ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ಸಿದ್ಧತಾ ದೃಷ್ಟಿಯಿಂದ ಪೋಷಕರ ಸಭೆಯನ್ನು ಆಯೋಜಿಸಲಾಯಿತು. ಸಭೆಯಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಮೋಹನ ಬಾಬು ಡಿ. ಇವರು ಶಾಲಾ ವ್ಯವಸ್ಥೆಗಳು, ಶೈಕ್ಷಣಿಕ ಯೋಜನೆಗಳು, ಪರೀಕ್ಷಾ ಫಲಿತಾಂಶ ಸುಧಾರಣೆಗೆ ಹಮ್ಮಿಕೊಂಡಿರುವ ವಿಶೇಷ ತರಗತಿಗಳು, ಮತ್ತು ಪೋಷಕರ ಜವಾಬ್ದಾರಿಯ ಬಗ್ಗೆ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪೋಷಕರನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿ ಮುಂಬರುವ ವಾರ್ಷಿಕ ಪರೀಕ್ಷೆಗೆ ತಮ್ಮ ಮಕ್ಕಳಿಗೆ ತಾವೇ ಗುಂಪಿನಲ್ಲಿ ಚರ್ಚಿಸಿ ನಿರ್ಣಯಿಸಿದಂತೆ, ದೈನಂದಿನ ಓದು, ಸಮಯ ಪಾಲನೆ, ಶಿಕ್ಷಕರು ನೀಡಿದ ಮನೆಗೆಲಸ ಪೂರ್ಣಗೊಳಿಸಿದ ಬಗ್ಗೆ, ವಿಚಾರಣೆ, ಟಿ.ವಿ. ಮೊಬೈಲ್ ಬಳಸದಿರುವ ಬಗ್ಗೆ ಅರಿವು ಮೂಡಿಸಲಾಯಿತು.

ಪೋಷಕರು ತಮ್ಮ ಮಕ್ಕಳೊಂದಿಗೆ ಪ್ರತಿದಿನ ಕಲಿಕೆಗೆ ಸಂಬಂಧಿಸಿದ ಕನಿಷ್ಟ ಒಂದು ಗಂಟೆ ಜೊತೆಗಿದ್ದು ಸೂಕ್ತ ಸಲಹೆ ಸೂಚನೆ ನೀಡುವುದು, ಮಕ್ಕಳು ವಿಷಯ ಶಿಕ್ಷಕರ ಭೇಟಿಯ ಮೂಲಕ ಸೂಕ್ತ ಮಾರ್ಗದರ್ಶನ ಪಡೆಯುವ ಬಗ್ಗೆ ಪೋಷಕರೇ ತಮ್ಮ ಮಕ್ಕಳಿಗೆ, ಶಿಕ್ಷಕರಾಗಿ ಬೋಧನೆ

ಮಾಡಿದ್ದು ವಿಶೇಷವಾಗಿತ್ತು. ಶಾಲಾ ಶಿಕ್ಷಕ ವೃಂದ ಪ್ರತಿ ತಂಡದೊಂದಿಗಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.
ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಸುಧಾಕ‌ರ್, ಸಮಿತಿಯ ಸದಸ್ಯರಾದ ಧರಣೇಂದ್ರ ಜೈನ್‌, ಆನಂದ ಶೆಟ್ಟಿ, ಶ್ರೀಮತಿ ಪ್ರೇಮ, ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕ ಶಿವಪುತ್ರ ಸುಣಗಾರ ಸ್ವಾಗತಿಸಿದರು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಹಾಗೂ ಶಾಲಾ ದೈಹಿಕ ಶಿಕ್ಷಕಿ ಶ್ರೀಮತಿ ಸುಜಯ್ ಬಿ. ವಂದಿಸಿದರು.

Related posts

ಗುರುವಾಯನಕರೆ: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಘಟಿಕೋತ್ಸವ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ 4ನೇ ವರ್ಷದ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆ ವೇಣೂರು ಪ್ರೌಢ ಶಾಲಾ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆಗೆ ಆಯ್ಕೆ

Suddi Udaya

ಉಜಿರೆ ಸ್ನೇಹಕಿರಣ್ ನರ್ಸರಿ ಶಾಲೆಗೆ ರಕ್ಷಿತ್ ಶಿವರಾಂ ಭೇಟಿ

Suddi Udaya

ನಯನಾಡು: ಶ್ರೀ ರಾಮ ಭಜನಾ ಮಂದಿರದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಎಸ್‌ಡಿಎಂ ಡಿ.ಎಡ್. ಹಾಗೂ ಬಿ.ಎಡ್. ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya
error: Content is protected !!