April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸ್ಪಂದನ ಬಂಟರ ಸೇವಾ ತಂಡದ 25ನೇ ಸೇವಾ ಕಾರ್ಯಕ್ರಮ: 25 ಕುಟುಂಬಗಳಿಗೆ ಸಹಾಯಧನ ವಿತರಣೆ

ಬೆಳ್ತಂಗಡಿ : ಸ್ಪಂದನ ಬಂಟರ ಸೇವಾ ತಂಡ ಬೆಳ್ತಂಗಡಿ ಇದರ 25ನೇ ಸೇವಾ ಕಾರ್ಯಕ್ರಮ ಜ.15ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಜರಗಿತು.

ಬೆಳ್ತಂಗಡಿ ಸ್ಪಂದನ ಬಂಟರ ಸೇವಾ ತ೦ಡದ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಲಾಯಿಲ ಬಂಟರ ಗ್ರಾಮ ಸಮಿತಿ ಅಧ್ಯಕ್ಷ ಜನಾರ್ಧನ ಶೆಟ್ಟಿ ಪೆರಿಂದಿಲೆ ಗೌರವ ಉಪಸ್ಥಿತರಿದ್ದರು.

ಆರ್ಥಿಕ ಅಸಕ್ತರಿಗೆ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ, ವೈದ್ಯಕೀಯ ಚಿಕಿತ್ಸೆಗಾಗಿ ಒಟ್ಟು ಸೇರಿ 25 ಕುಟುಂಬದವರಿಗೆ ಸಹಾಯಧನ ರೂ. 3ಲಕ್ಷ 50 ಸಾವಿರ ಫಲಾನುಭವಿ ಚೆಕ್ ನೀಡಲಾಯಿತು.


ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀನಿವಾಸ್, ಕೋಶಾಧಿಕಾರಿ ಸುರೇಶ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಅಧ್ಯಕ್ಷರಾದ ಸುರೇಶ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ನಿರೂಪಿಸಿ, ಕಿರಣ್ ಕುಮಾರ್ ಶೆಟ್ಟಿ ಧನ್ಯವಾದವಿತ್ತರು.

Related posts

ಕ್ಷುಲಕ ವಿಚಾರದಲ್ಲಿ ಮಕ್ಕಳ ಜೊತೆ ಗಲಾಟೆ: ಬೆಂಗಳೂರಿನ ವೃದ್ಧ ಧಮ೯ಸ್ಥಳಕ್ಕೆ ಬಂದು ಖಾಸಗಿ ಲಾಡ್ಜ್ ನಲ್ಲಿ ವಿಷಸೇವಿಸಿ ಆತ್ಮಹತ್ಯೆ

Suddi Udaya

ಖಾತಾ ಬದಲಾವಣಿ, ಪಹಣಿ ತಿದ್ದುಪಡಿಯಂತಹ ಸಾರ್ವಜನಿಕ ಕೆಲಸಗಳಿಗೆ ತಾಂತ್ರಿಕ ಸಮಸ್ಯೆ: ಕನ್ನಡಸೇನೆ-ಕರ್ನಾಟಕ” ಬೆಳ್ತಂಗಡಿ ತಾಲೂಕಿನಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya

ಗುರುವಾಯನಕೆರೆ ವಲಯದ ಪವಿತ್ರ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ದಿನ ಕಾರ್ಯಕ್ರಮ

Suddi Udaya

ಕಲ್ಮಂಜ ಸ.ಪ್ರೌ. ಶಾಲೆಯಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya

ಧರ್ಮಸ್ಥಳ : ಕಲ್ಲೇರಿಯಲ್ಲಿ ಸುನಿಲ್ ರೆಡಿವೇರ್ಸ್ ಶುಭರಾಂಭ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಸತೀಶ್ ಹೊಳ್ಳರವರಿಗೆ ಸೇವಾ ನಿವೃತ್ತಿ

Suddi Udaya
error: Content is protected !!