38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅನಾರು : ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವ: “ಅನಾರ್ ಡ್ ಓಂಕಾರ್” ಆಲ್ಬಮ್ ಸಾಂಗ್ ಬಿಡುಗಡೆ

ಅನಾರು : ಇಲ್ಲಿಯ ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವವು ಜ.14 ರಂದು ಪ್ರಾರಂಭಗೊಂಡು ಜ. 18 ರ ವರೆಗೆ ಜರುಗಲಿದೆ.

ಜ. 14 ರಂದು ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅನುವಂಶಿಕ ಆಡಳಿತ ಮೊಕ್ತೇಸರರಾದ ನಿತೇಶ್ ಬಲ್ಲಾಳ್ ಉಳಿಯಬೀಡು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ರಮೆ ಗ್ರಾ. ಪಂ. ಅಧ್ಯಕ್ಷ ಮನೋಜ್ ಆಗಮಿಸಿದ್ದರು.

ವೇದಿಕೆಯಲ್ಲಿ ಪವಿತ್ರಪಾಣಿ ಶ್ರೀಧರ ಶಬರಾಯ, ಸೇವಾ ಸಮಿತಿಯ ಅಧ್ಯಕ್ಷರಾದ ಹರೀಶ್ ಗೌಡ ಅಪ್ರೋಡಿ, ಉಪಾಧ್ಯಕ್ಷರಾದ ಪದ್ಮನಾಭ ಕಾಯಿಲ, ಕಾರ್ಯದರ್ಶಿ ಶರಶ್ಚಂದ್ರ ಹಿರ್ತಡ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಟ್ರಮೆ ಗ್ರಾ.ಪಂ. ಅಧ್ಯಕ್ಷ ಮನೋಜ್ ರವರನ್ನು ಕ್ಷೇತ್ರದ ವತಿಯಿಂದ ಅಭಿನಂದಿಸಲಾಯಿತು. “ಅನಾರ್ ಡ್ ಓಂಕಾರ್” ಆಲ್ಬಮ್ ಸಾಂಗ್ ನ್ನು ಅನುವಂಶಿಕ ಆಡಳಿತ ಮೊಕ್ತೇಸರರಾದ ನಿತೇಶ್ ಬಲ್ಲಾಳ್ ಬಿಡುಗಡೆಗೊಳಿಸಿದರು.

ಭವ್ಯ ಕಾಯಿಲ ಪ್ರಾರ್ಥಿಸಿ, ಜಯರಾಮ ನೆಕ್ಕಿಲು ಸ್ವಾಗತಿಸಿದರು. ಧರ್ಮಸ್ಥಳದ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ ರಾವ್ ನಿರೂಪಿಸಿ, ವರ್ಣಾಶ್ರೀ ಧನ್ಯವಾದವಿತ್ತರು.

ರಾತ್ರಿ ಸ. ಉ. ಹಿ. ಪ್ರಾ. ಶಾಲೆ, ಅನಾರು, ಪಟ್ರಮೆ ಮತ್ತು ಸ.ಕಿ. ಪ್ರಾ.ಶಾಲೆ, ಸುರ್ಯತ್ತಾವು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related posts

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕೆ. ರಾಧಾಕೃಷ್ಣ ಆಯ್ಕೆ

Suddi Udaya

ಕೊಕ್ಕಡ: ಹಿಂದೂ ಜಾಗರಣ ವೇದಿಕೆ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಘಟಕ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ : ಸೌಜನ್ಯ ತಾಯಿ ದೂರು

Suddi Udaya

ಅರಸಿನಮಕ್ಕಿಯಲ್ಲಿ ಹಿಂದೂ ಸಂಗಮ

Suddi Udaya

ಬದನಾಜೆ ಶಾಲಾ ಅಮೃತಮಹೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!