23.8 C
ಪುತ್ತೂರು, ಬೆಳ್ತಂಗಡಿ
May 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಳಂಜ: ಸರ್ವೋದಯ ಫ್ರೆಂಡ್ಸ್ ಕ್ಲಬ್ ಅಟ್ಲಾಜೆ ಬಳಂಜ ಇದರ ವತಿಯಿಂದ ನಡೆಯುವ ವಾರ್ಷಿಕ ಕ್ರೀಡಾಕೂಟ ಹಾಗೂ ಗಣರಾಜ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಅಟ್ಲಾಜೆ ಕ್ರೀಡಾಂಗಣದಲ್ಲಿ ನಡೆಯಿತು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅದ್ಯಕ್ಷ, ಸುದ್ದಿ ಉದಯ ವಾರಪತ್ರಿಕೆಯ ಉಪಸಂಪಾದಕ ಸಂತೋಷ್ ಪಿ ಕೋಟ್ಯಾನ್ ಆಂಮತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲೆಂದು ಶುಭ ಹಾರೈಸಿದರು.

ಪ್ರಗತಿಪರ ಕೃಷಿಕ, ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ ಸರ್ವೋದಯ ಫ್ರೆಂಡ್ಸ್ ಕ್ಲಬ್ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವೋದಯ ಫ್ರೆಂಡ್ಸ್ ಕ್ಲಬ್ ಅದ್ಯಕ್ಷ ಸುರೇಶ್ ಪೂಜಾರಿ ಹೇವ ವಹಿಸಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಕೋರಿದರು.

ವೇದಿಕೆಯಲ್ಲಿ ಸರ್ವೋದಯ ಫ್ರೆಂಡ್ಸ್ ಕ್ಲಬ್ ನ ಕ್ರೀಡಾ ಕಾರ್ಯದರ್ಶಿ ಲತೇಶ್ ಪೆರಾಜೆ, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಸಮಿತಿಯ ಸರ್ವ ಪದಾಧಿಕಾರಿಗಳು ಸಹಕರಿಸಿದರು.

ಹರೀಶ್ ವೈ ಚಂದ್ರಮ ಸ್ವಾಗತಿಸಿ, ವಂದಿಸಿದರು.

Related posts

ಉಮಾಮಹೇಶ್ವರ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಕಿರಿಯಾಡಿ ವೃತ್ತ ಲೋಕಾರ್ಪಣೆ

Suddi Udaya

ಕೊಕ್ಕಡ ಅಮೃತ ಗ್ರಾ.ಪಂ. ನಿಂದ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ವಿಭಾಗಿಯ ಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ; ವಾರ್ಷಿಕ “ದಿಕ್ರ್ ಹಲ್ಖಾ” ಕಾರ್ಯಕ್ರಮ: ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Suddi Udaya

ಉರುವಾಲು ನಿವಾಸಿ ನವವಿವಾಹಿತೆ ಪುತ್ತೂರಿನ ಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಗೇರುಕಟ್ಚೆ: ಸಾವಿರ ಕದಳಿ ಬಾಳೆ ಗೊನೆ ಚಮತ್ಕಾರ

Suddi Udaya
error: Content is protected !!