September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಣೆಜಾಲು- ಗುಂಪಲಾಜೆ ಶ್ರೀ ನಾಗ-ರಕ್ತೇಶ್ವರಿ ಹಾಗೂ ಪರಿವಾರ ದೈವಗಳಿಗೆ ದೇವಸ್ಥಾನ, ಕಟ್ಟೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ

ಪಣೆಜಾಲು-ಗುಂಪಲಾಜೆ : ಓಡಿಲ್ನಾಳ ಗ್ರಾಮದ ನಾಗಚಾವಡಿ, ಗುಂಪಲಾಜೆ ಎಂಬಲ್ಲಿ ನಾಗ-ರಕ್ತೇಶ್ವರಿ ಹಾಗೂ ಪರಿವಾರ ದೈವಗಳಿಗೆ ದೇವಸ್ಥಾನ, ಕಟ್ಟೆಗಳಿಗೆ ವೈದಿಕ ವಿಧಿ-ವಿಧಾನಗಳೊಂದಿಗೆ, ಗಣ್ಯರ ಉಪಸ್ಥಿತಿಯಲ್ಲಿ “ಶಿಲಾನ್ಯಾಸ” ಕಾರ್ಯಕ್ರಮ ಯಶಸ್ವಿಯಾಗಿ ಜ.14 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರ್ಮಿಕ ಮುಂದಾಳು, ಸಮಾಜಸೇವಕರು,ಕೊಡುಗೈ ದಾನಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ, ಬರೋಡಾರವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಜನರು‌ ಭಕ್ತಿ, ಶ್ರದ್ದೆಯಿಂದ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಲ್ಲಿ, ಎಲ್ಲಾರಿಗೂ ಈ ಅವಕಾಶ ಸಿಗೋದಿಲ್ಲ,ಸಿಕ್ಕಿದ್ದು ನಿಮ್ಮೆಲ್ಲರ ಸೌಭಾಗ್ಯ , ನನ್ನ ಕಡೆಯಿಂದಲೂ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗ-ರಕ್ತೇಶ್ವರಿ ಸೇವಾ ಟ್ರಸ್ಟ್ ನ ಅಧ್ಯಕ್ಷ, ಶಶಿರಾಜ್ ಶೆಟ್ಟಿಯವರು ಈ ಕ್ಷೇತ್ರ ಮುಂದಿನ ದಿನಗಳಲ್ಲಿ ಕಾರ್ಣಿಕದ ಕ್ಷೇತ್ರವಾಗಿ ನಮ್ಮ ಕಣ್ಣಾಮುಂದೆ ಬರಲಿದೆ..ಈ ಶುಭ ಕಾರ್ಯಕ್ಕೆ ಭಕ್ತಾದಿಗಳು ಸಾಮಾರ್ಥ್ಯಕನುಸಾರವಾಗಿ ದೇಣಿಗೆ ನೀಡುವುದರ ಮೂಲಕ ನಮ್ಮ ಜೋತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಆನಂದ್ ಶೆಟ್ಟಿ ಐಸಿರಿಯವರು ಮಾತನಾಡಿ ಕಳೆದ ಎರಡು-ಮೂರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡಬೇಕೆಂದು ಭಕ್ತಾದಿಗಳು ಇಟ್ಟಂತಹ ಕನಸು ಇಂದು ನೆರವೇರುತ್ತಿದೆ, ವಿವಿಧ ರೀತಿಯಲ್ಲಿ ಭಕ್ತರು ಜೊತೆಗೂಡಿ ಸಹಕಾರ ನೀಡಬೇಕೆಂದು ವಿಜ್ಞಾಪಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರು ಉಪಸ್ಥಿತರಿದ್ದು ಶುಭಹಾರೈಸಿದರು.

ವೇದಿಕೆಯಲ್ಲಿ ರಾಜು ಶೆಟ್ಟಿ ಬೇಂಗ್ಯತ್ಯಾರ್, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಎಸ್ ಶೆಟ್ಟಿ ,ವಾಸ್ತುತಜ್ಞರಾದ ರತ್ನಾಕರ ಭಟ್ ಸರಪಾಡಿ-ಮದ್ದಡ್ಕ ,ಯತೀಶ್ ಕುಲಾಲ್ ಸಿರಿಮಜಲ್, ಕಿರಣ್ ಭಟ್ ಗುಂಪಲಾಜೆ, ಹಿರಿಯರಾದ ಎ.ಪೂವಪ್ಪ ಭಂಡಾರಿ,ಶಶಿಧರ ಶೆಟ್ಟಿ ,ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಚಿದಾನಂದ ಇಡ್ಯ ,ಹಿರಿಯರಾದ ಶಂಕರ್ ಗಾಣಿಗ ಗುಂಪಲಾಜೆ ಉಪಸ್ಥಿತರಿದ್ದು ಶುಭ ಹಾರೈಸಿದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್, “ಸಮೃದ್ದಿ” ಗುಂಪಲಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕೋಶಾಧಿಕಾರಿ ಪ್ರೇಮ್ ನಾಥ್ ಶೆಟ್ಟಿ, ರಂಜಿತ್ ಸಪಲ್ಯ, ಸತೀಶ್ ಗೌಡ, ಲೋಕೇಶ್ ಆಚಾರ್ಯ, ನೋಣಯ್ಯ ಗೌಡ, ಹರೀಶ್ ಗೌಡ, ಸತೀಶ್ ಕುಲಾಲ್ ನಾಗಚಾವಡಿ,ಶಶಿಧರ ಹೆಗ್ಡೆ, ಧನಂಜಯ ಶೆಟ್ಟಿ, ಚಂದ್ರಶೇಖರ ಕುಲಾಲ್, ಲೋಕೇಶ್ ಗೌಡ, ಶ್ರೀಮತಿ ಆಶಾ, ಶ್ರೀಮತಿ ಶಶಿಕಲಾ, ಶ್ರೀಮತಿ ನಳಿನಿ, ಶ್ರೀಮತಿ ರಮ್ಯ, ಶ್ರೀಮತಿ ಗೋಪಿಕಾ, ಶ್ರೀಮತಿ ದಿಶ್ಮಿತಾ , ಮುಂತಾದವರು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ರಾಜ್ಯಮಟ್ಟದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಬಜಿರೆ ಶಾಲೆಯ ವಿದ್ಯಾರ್ಥಿನಿ ಕ್ಷಮಾ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

Suddi Udaya

ಡಿ.27: ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಸಭೆ

Suddi Udaya

ಕಳೆಂಜ ನಂದಗೋಕುಲ ಗೋಶಾಲೆಗೆ ಉಜಿರೆ ಕಿರಣ್ ರಾವ್ ಕುಟುಂಬಸ್ಥರಿಂದ ರೂ.5ಲಕ್ಷ ದೇಣಿಗೆ

Suddi Udaya

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ “ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ” ಕಾರ್ಯಾಗಾರ

Suddi Udaya

ಸುಲ್ಕೇರಿ: ಎಸ್.ಡಿ.ಎಂ ಸ್ನಾತಕೋತ್ತರ ಪದವಿ ಕೇಂದ್ರ ಮತ್ತು ಗ್ರಾ.ಪಂ ವತಿಯಿಂದ ಗ್ರಾಮ‌ ಸಮೀಕ್ಷೆ ಕಾರ್ಯಕ್ರಮ

Suddi Udaya

ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya
error: Content is protected !!