ಬೆಳ್ತಂಗಡಿ: ಶಶಾಂಕ ಕುಳಮರ್ವ ರವರಿಗೆ ಸುರತ್ಕಲ್ ಎನ್.ಐ.ಟಿ.ಕೆ. ಯಿಂದ ಪಿ.ಎಚ್.ಡಿ. ಪದವಿ

Suddi Udaya

ಬೆಳ್ತಂಗಡಿ: ಶಶಾಂಕ ಕುಳಮರ್ವ ಅವರು ಮಂಡಿಸಿದ “ಎ ಸ್ಟಡಿ ಆನ್ ಅಸೈಕ್ಲಿಕ್ ಎಡ್ಜ್ ಕಲರಿಂಗ್ ಆಂಡ್ ಡಾಮಿನೇಷನ್ ನಂಬ‌ರ್ ಆಫ್ ಎ ಗ್ರಾಫ್” ಎಂಬ ಮಹಾಪ್ರಬಂಧಕ್ಕೆ ಸುರತ್ಕಲ್ ಎನ್.ಐ.ಟಿ.ಕೆ. ( ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ) ಯು ಪಿ.ಎಚ್.ಡಿ. ಪದವಿಯನ್ನು ನೀಡಿದೆ.

ಈ ಮೊದಲು ಶಶಾಂಕ ಕುಳಮರ್ವ ಅವರು ಚೆನ್ನೈಯ ಐ.ಐ.ಟಿ. (ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಮದ್ರಾಸ್‌ನಿಂದ ಗಣಿತದಲ್ಲಿ ಎಮ್.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಇದೀಗ ಎನ್.ಐ.ಟಿ.ಕೆ. ಯಿಂದ ಡಾ. ಸುರೇಶ್ ಎಂ. ಹೆಗಡೆ ಹಾಗೂ ಡಾ. ಮನು ಬಸವರಾಜು ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಐ.ಐ.ಎಸ್.ಸಿ. (ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸೈನ್ಸ್) ನ ಕಂಪ್ಯೂಟರ್ ಸೈನ್ಸ್‌ ಆಂಡ್ ಆಟೋಮೇಷನ್‌ ವಿಭಾಗದಲ್ಲಿ ಪೋಸ್ಟ್-ಡಾಕ್ಟೋರಲ್ ರಿಸರ್ಚ್ ಅಸೋಸಿಯೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು ನಿವೃತ್ತ ಪ್ರಾಂಶುಪಾಲರಾದ ಪ್ರೊ| ಗಣಪತಿ ಭಟ್ ಕುಳಮರ್ವ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ವಸಂತಿ ಕುಳಮರ್ವ ಅವರ ಪುತ್ರ.

Leave a Comment

error: Content is protected !!