28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಮಾಜಿ ಶಾಸಕ ಕೆ. ವಸಂತ ಬಂಗೇರರ 79ನೇ ಹುಟ್ಟು ಹಬ್ಬದ ಆಚರಣೆ, ಬೃಹತ್ ರಕ್ತದಾನ ಶಿಬಿರ ಹಾಗೂ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವಲ್ಲಿ ಸಹಕರಿಸಿದ ದಾನಿಗಳಿಗೆ ಅಭಿನಂದನೆ

ಬೆಳ್ತಂಗಡಿ: ವಸಂತ ಬಂಗೇರ ಅಭಿಮಾನಿ ಬಳಗ ಬೆಳ್ತಂಗಡಿ ಹಾಗೂ ಶ್ರೀ ಗುರುದೇವ ವಿದ್ಯಾಸಂಸ್ಥೆ, ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಜಿ ಶಾಸಕರಾದ ಕೆ. ವಸಂತ ಬಂಗೇರರ 79ನೇ ಹುಟ್ಟು ಹಬ್ಬದ ಪ್ರಯುಕ್ತ, ಬೃಹತ್ ರಕ್ತದಾನ ಶಿಬಿರ ಹಾಗೂ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವಲ್ಲಿ ಸಹಕರಿಸಿದ ದಾನಿಗಳಿಗೆ ಅಭಿನಂದನಾ ಸಮಾರಂಭ ಜ. 15ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಜರಗಿತು.

ಕಾರ್ಯಕ್ರಮವನ್ನು ವಸಂತ ಬಂಗೇರ ಅಭಿಮಾನಿ ಬಳಗ ಬೆಳ್ತಂಗಡಿ ಅಧ್ಯಕ್ಷ ಈಶ್ವರ ಭಟ್ ಮೈಲತ್ತೋಡಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ ವಹಿಸಿದ್ದರು.

ಅತಿಥಿಗಳಾಗಿ ಸುವರ್ಣ ಕ್ಲಿನಿಕ್, ಅಳದಂಗಡಿಯ . ಡಾ. ಹರಿಪ್ರಸಾದ್, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ಶ್ರೀಮತಿ ಸುಜಿತಾ ವಿ. ಬಂಗೇರ, ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ನಿಯೋಜಿತ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಭಾಗವಹಿಸಿದ್ದರು.

ವೇದಿಕೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ , ಮಾಜಿ ಜಿ.ಪಂ ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಪ್ರಮುಖರೋದ ಸುಮತಿ ಪ್ರಮೋದ್, ಸತೀಶ್ ಕಾಶಿಪಟ್ನ, ಎಂ.ಕೆ ಪ್ರಸಾದ್, ಭಗೀರಥ ಜಿ., ಸುಂದರ ಪೂಜಾರಿ, ಲೋಕೇಶ್ ಗೌಡ ಕೊಯ್ಯೂರು, ರಾಜಶೇಖರ ಶೆಟ್ಟಿ ಮಡಂತ್ಯಾರು, ಎಂ.ಎಸ್ ವಮ೯, ಶ್ರೀಮತಿ ನಮಿತಾ, ಲಕ್ಷ್ಮಣ ಗೌಡ, ಡಿ.ಕೆ ಅಯೂಬ್, ಗುರುದೇವ ಕಾಲೇಜು ಪ್ರಾಂಶುಪಾಲ ಸುರೇಶ್, ಉಪಪ್ರಾಂಶುಪಾಲ ಶಮೀಮುಲ್ಲಾ, ವೆನ್ಲಾಕ್ ಆಸ್ಪತ್ರೆಯ ಡಾ.ದಿಶಾ ಮತ್ತು ಡಾ. ಆಂಟನಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಶೈಕ್ಷಣಿಕ ದಾನಿಗಳಿಗಳನ್ನು ಅಭಿನಂದನೆ ಸಲ್ಲಿಸಲಾಯಿತು. ನ್ಯಾಯವಾದಿ ಮನೋಹರ್ ಇಳಂತಿಲ ಸ್ವಾಗತಿಸಿದರು. ಉಪನ್ಯಾಸಕರಾದ ಹರೀಶ್ ಪೂಜಾರಿ ಮತ್ತು ಸೌಜನ್ಯ ಕಾಯ೯ಕ್ರಮ ನಿರೂಪಿಸಿದರು. ಗುರುದೇವ ಪ್ರ.ದ ಕಾಲೇಜು ಪ್ರಾಂಶುಪಾಲ ಡಾ.ಸವಿತಾ ವಂದಿಸಿದರು.

Related posts

ಉಜಿರೆ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ ಪ್ರಯುಕ್ತ  ಕಾವ್ಯವಾಚನ-ವ್ಯಾಖ್ಯಾನ   

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ವೇಣೂರು: ಉಳ್ತೂರಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೂರುಲ್ ಹುದಾ ದರ್ಸ್ ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ ಯುವವಾಹಿನಿಯಿಂದ ‘ತುಳುನಾಡ ತುಡರ ಪರ್ಬ ‘

Suddi Udaya

ವ್ಯಾಪಕ ಮಳೆ: ಜು.9 ದ.ಕ. ಜಿಲ್ಲಾದ್ಯಂತ ಶಾಲೆ-ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಧರ್ಮಸ್ಥಳ: ಕಾಲೇಜು ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

Suddi Udaya
error: Content is protected !!