September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸಾಮಾನ್ಯ ಸಭೆ: ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ : ಆದಿ ದ್ರಾವಿಡ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಇದರ ಸಾಮಾನ್ಯ ಸಭೆಯು ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಕೊಕ್ಕಡ ವಹಿಸಿದ್ದರು. ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ರಾಜ್ಯ ಜೊತೆ ಕಾರ್ಯದರ್ಶಿ ಸುರೇಶ್ ಪಿ. ಬಿ., ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ಪ್ರಮುಖರಾದ ರಘು ಧರ್ಮಸೇನ್, ಶೇಖರ್ ಕುಕ್ಕೇಡಿ, ಗೋಪಾಲಕೃಷ್ಣ ಕುಕ್ಕಳ, ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವ ಸಲಹೆಗಾರರಾದ ಗೋಪಾಲಕೃಷ್ಣ ಕುಕ್ಕಳ ಸಭೆಯ ಉದ್ದೇಶಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸಂಘಟನೆ ಬಲವರ್ಧನೆಗಾಗಿ ಹೊಸ ಪದಾಧಿಕಾರಿಗಳನ್ನು ಸೇರ್ಪಡೆಗೊಳಿಸಲಾಯಿತು.
ಗೌರವಾಧ್ಯಕ್ಷರಾಗಿ ರಾಘವ ಕಲ್ಮಂಜ, ಅಧ್ಯಕ್ಷರಾಗಿ ದಿನೇಶ್ ಕೆ ಕೊಕ್ಕಡ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ್ ವಿ ಧರ್ಮಸ್ಥಳ‌, ಉಪಾಧ್ಯಕ್ಷರಾಗಿ ರಾಮ ಪಡಂಗಡಿ, ಅವಿನಾಶ್ ಕುರ್ಲೋಟ್ಟು, ಶ್ರೀನಿವಾಸ್ ಉಜಿರೆ, ಜಗನ್ನಾಥ್ ಕೊಯ್ಯೂರು, ಶ್ರೀಮತಿ ಯಮುನಾ ನಾರಾವಿ, ಜೊತೆ ಕಾರ್ಯದರ್ಶಿಯಾಗಿ ಶಿವಕುಮಾರ್ ಮಡಂತ್ಯಾರ್, ಚಂದ್ರಶೇಖರ್ ಮೂಡುಕೋಡಿ, ಉಮೇಶ್ ಮಡಂತ್ಯಾರು, ಕೋಶಾಧಿಕಾರಿಯಾಗಿ ಜಿನ್ನು ಕರಿಮಣೇಲು, ಸಂಘಟನಾ ಕಾರ್ಯದರ್ಶಿಯಾಗಿ ಕೊರಗಪ್ಪ ಕೊಯ್ಯೂರು, ಶಿವಾನಂದ ಪಡಂಗಡಿ, ಯತೀಶ್ ಧರ್ಮಸ್ಥಳ, ಅವಿನಾಶ್ ಕುರ್ತೋಡಿ, ವಿನಯ ಕುಮಾರ್ ಉಜಿರೆ, ಅಜಯ್ ನಾರಾವಿ, ಕಿರಣ್ ಅಳದಂಗಡಿ, ರಾಮ್ ಕುಮಾರ್ ಕರಂಬಾರು, ಆನಂದ ನೆಲ್ಲಿಂಗೇರಿ, ವಿಜಯ ಬಜಿರೆ, ಕೇಶವ ಅಳಕೆ, ಶ್ರೀನಿವಾಸ್ ಪಿ.ಎಸ್, ರಘು ಧರ್ಮಸ್ಥಳ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕುಮಾರಿ ಗೌರಿ‌ ‌, ಶರತ್ ಕೊಕ್ಕಡ, ಸುರೇಶ ಧರ್ಮಸ್ಥಳ, ಗೌರವ ಸಲಹೆಗಾರರಾಗಿ ಶೇಖರ್ ಕುಕ್ಕೇಡಿ, ಗೋಪಾಲಕೃಷ್ಣ ಕುಕ್ಕಳ, ಶ್ರೀ ಅಮ್ಮ ಕುಮಾರ್, ಚನ್ನಪ್ಪ ಕೊಲ್ಪದಬೈಲು, ಓಬಯ್ಯ ಆರಂಬೋಡಿ, ಬಾಬು ಬೆಳಾಲು, ವೇಣುಗೋಪಾಲ ಕರಂಬಾರ್, ಶಿವಪ್ಪ ಗರ್ಡಾಡಿ, ಬಾಬು ಉಜಿರೆ, ದಿನಕರ ಬಡಕೋಡಿ, ಸುರೇಶ್ ಹೊಕ್ಕಾಡಿ ಅವರು ಆಯ್ಕೆಯಾದರು.

Related posts

ಬೆಳ್ತಂಗಡಿಯ ನ್ಯಾಯಾಲಯ ಮತ್ತು ವಕೀಲರ ಸಂಘಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಭೇಟಿ

Suddi Udaya

ಬೆಳ್ತಂಗಡಿ: ಯುವ ಇಂಜೀನಿಯರ್ ಕುತೂಬುದ್ದೀನ್ ಗೋಳಿಕಟ್ಟೆ ಹೃದಯಾಘಾತದಿಂದ ನಿಧನ

Suddi Udaya

ನಕಲಿ ಸಹಿ ಮಾಡಿ ಅಕ್ಷರ ದಾಸೋಹ ಮತ್ತು ಎಸ್.ಎಸ್.ಎ. ಖಾತೆಯ ಹಣ ಡ್ರಾ; ಮುಖ್ಯ ಶಿಕ್ಷಕಿಯ ವಿರುದ್ಧ ಎಸ್.ಡಿ.ಎಂ.ಸಿ ಅಧ್ಯಕ್ಷೆ ದೂರು: ಪೋಜ೯ರಿ ಸಹಿ ಮಾಡಿ ಶಾಲೆಯ ಖಾತೆಯಿಂದ ಯಾವತ್ತೂ ಹಣವನ್ನು ಡ್ರಾ ಮಾಡಿರುವುದಿಲ್ಲ : ಮುಖ್ಯ ಶಿಕ್ಷಕಿ ಸ್ಪಷ್ಟನೆ

Suddi Udaya

ಮಚ್ಚಿನ ಶ್ರೀ ವಿದ್ಯಾಸಾಗರ ಶಾಲೆಯಲ್ಲಿ ಮಕ್ಕಳ ಆಹಾರ ಮೇಳ

Suddi Udaya

ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ಸಾಧಕರಿಗೆ ಸನ್ಮಾನ

Suddi Udaya

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ವಾಣಿಜ್ಯ ವ್ಯವಹಾರಗಳ ಅಧ್ಯಯನದಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ಪಾತ್ರ’ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!