ಬೆಳ್ತಂಗಡಿ: ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಇಡೀ ದೇಶದ ಪ್ರತಿ ಗ್ರಾಮದಲ್ಲೂ ಹಬ್ಬದ ರೀತಿಯಲ್ಲಿ ಆಚರಿಸುವಂತೆ, 1992ರಲ್ಲಿ ಅಯೋಧ್ಯೆಯಿಂದ ಬಂದಿರುವ ಇಟ್ಟಿಗೆಯಿಂದ ಹುಣ್ಸೆಕಟ್ಟೆ ಶ್ರೀರಾಮ ಭಜನಾ ಮಂಡಳಿಯು ಪ್ರಾರಂಭವಾಗಿದ್ದು, ಇದರ ನೆನಪಿಗೋಸ್ಕರ ಹುಣ್ಸೆಕಟ್ಟೆ ಶ್ರೀರಾಮ ಭಜನಾ ಮಂಡಳಿಯ ವತಿಯಿಂದ ಕೃಷ್ಣ ಕುಮಾರ್ ಐತಾಳ್ ಪಂಜಿರ್ಪು ಇವರ ನೇತೃತ್ವದಲ್ಲಿ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಬೆಳಿಗ್ಗೆ 5.30ರಿಂದ ನಗರ ಸಂಕೀರ್ತಣೆ, ಬೆಳಿಗ್ಗೆ 9.30 ಗಂಟೆಗೆ ರಾಮ ತಾರಕ ಮಂತ್ರ ಹೋಮ, ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 8.00ಗಂಟೆಗೆ ಶ್ರೀರಾಮ ಮಂದಿರದ ವಿಜಯೋತ್ಸವವು ಹುಣ್ಸೆಕಟ್ಟೆ ಶ್ರೀರಾಮಂಜನೇಯ ವೃತ್ತದ ಬಳಿ ಭಜನೆ ಹಾಗೂ ಸುಡುಮದ್ದು ಪ್ರದರ್ಶನದೊಂದಿಗೆ ನಡೆಯಲಿದೆ.