ಬೆಳ್ತಂಗಡಿ: ಟೆಲಿಗ್ರಾಮ್ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಅಪರಿಚಿತ ಖಾತೆಗೆ ಕಮೀಷನ್ ಪಡೆಯುವ ಉದ್ದೇಶದಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ 3,46,799/- ಹಣವನ್ನು ವರ್ಗಾಯಿಸಿದ್ದು, ಅಪರಿಚಿತ ಆರೋಪಿಗಳು ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು, ಯಾವುದೇ ಕಮೀಷನ್ ನೀಡದೇ ಹಾಗೂ ವರ್ಗಾಯಿಸಿಕೊಂಡ ಹಣವನ್ನೂ ಹಿಂತಿರುಗಿಸದೇ ವಂಚಿಸಿರುವ ಘಟನೆ ಜ.15 ರಂದು ನಡೆದಿದೆ.
ಓಡಿಲ್ನಾಳ ನಿವಾಸಿ ಸುರೇಶ್ ನಾಯ್ಕ (26) ಎಂಬವರ ದೂರಿನಂತೆ, ಜ. 04 ರಂದು ಟೆಲಿಗ್ರಾಮ್ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಕಮೀಷನ್ ಪಡೆಯುವಂತೆ ಲಿಂಕ್ ಮತ್ತು ಮೇಸೆಜ್ ಬಂದಿರುತ್ತದೆ. ಅದರಂತೆ ಸುರೇಶ್ ರವರು ತಮ್ಮ ಬಾಬ್ತು ಖಾತೆ ವಿವರ ಮತ್ತು ಮೊಬೈಲ್ ನಂಬ್ರಗಳನ್ನು ನೀಡಿರುತ್ತಾರೆ. ಬಳಿಕ ಜ. 04 ರಿಂದ ಜ. 15 ರ ವರೆಗೆ ಒಟ್ಟು ರೂ 3,46,799/- ರೂ ಹಣವನ್ನು ಅಪರಿಚಿತ ಖಾತೆಗೆ ಕಮೀಷನ್ ಪಡೆಯುವ ಉದ್ದೇಶದಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು, ಅಪರಿಚಿತ ಆರೋಪಿಗಳು ಪಿರ್ಯಾದಿದಾರರ ಬಾಬ್ತು ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು, ಯಾವುದೇ ಕಮೀಷನ್ ನೀಡದೇ ಹಾಗೂ ವರ್ಗಾಯಿಸಿಕೊಂಡ ಹಣವನ್ನೂ ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 02/2024 ಕಲಂ;419,420 IPC , & 66(D) IT Act ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.