ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಬೆಳ್ತಂಗಡಿ ಕೌಶಲ್ಯಭಿವೃದ್ಧಿ ತರಬೇತಿಯಡಿ ಬಟ್ಟೆ ಚೀಲ ಮತ್ತು ಎಂಬ್ರಾಯಿಡರಿ ಉಚಿತ ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ( ರಿ.) ಧರ್ಮಸ್ಥಳ, ಗ್ರಾಮೀಣ ಶೇಷ್ಠತಾ ಕೇಂದ್ರ ಬೆಳ್ತಂಗಡಿಯ ಕೌಶಲ್ಯಭಿವೃದ್ಧಿ ತರಬೇತಿಯಡಿ ಯೋಜನೆಯ ಪಾಲುದಾರ ಬಂಧುಗಳಿಗೆ ಬಟ್ಟೆ ಚೀಲ ಮತ್ತು ಎಂಬ್ರಾಯಿಡರಿ ಐದು ದಿನ ನಡೆಯುವ ಉಚಿತ ತರಬೇತಿಯನ್ನು ತಣ್ಣೀರುಪಂತ ವಲಯದ ಕುಪ್ಪೆಟ್ಟಿಯ ಬದ್ರಿಯಾ ಕಾಂಪ್ಲೆಕ್ಸ್ ನ ಆದಂರವರ ಕಟ್ಟಡದಲ್ಲಿ ತಣ್ಣೀರುಪಂತ ವಲಯದ ಪ್ರಗತಿಬಂದು ಸ್ವ ಸಹಾಯ ಸಂಘದ ವಲಯಾಧ್ಯಕ್ಷರಾದ ರಾಮಣ್ಣ ಗೌಡ ಅಧ್ಯಕ್ಷತೆಯಲ್ಲಿ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಣಿಯೂರು ಪಂಚಾಯತ್ ಅಧ್ಯಕ್ಷರಾದ ಯಶವಂತ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ಉಪಸ್ಥಿತರಿದ್ದರು, ವೇದಿಕೆಯಲ್ಲಿ ಜನಜಾಗೃತಿ ವಲಯಧ್ಯಕ್ಷ ಪ್ರಭಾಕರ ಗೌಡ ಪೋಸಂದೋಡಿ, ಟೈಲರಿಂಗ್ ಶಿಕ್ಷಕಿ ಉಷಾ ಉಪಸ್ಥಿತರಿದ್ದರು.ತರಬೇತಿಯಲ್ಲಿ ಸ್ವ ಉದ್ಯೋಗ ಮಾಡುವಲ್ಲಿ ಪ್ರೇರಣೆಯನ್ನು ಮತ್ತು ಉದ್ದೇಶದ ಬಗ್ಗೆ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಂಶುಪಾಲರಾದ ಸೋಮನಾಥ. ಕೆ ಮಾಹಿತಿ ನೀಡಿದರು. ಈ ಕಾರ್ಯಕ್ರಮವನ್ನು ಸೇವಾಪ್ರತಿನಿಧಿ ಸಂದ್ಯಾ ಪ್ರಾರ್ಥಿಸಿ, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕಿ ಅಶ್ವಿನಿ ನಿರೂಪಿಸಿ, ಮೇಲ್ವಿಚಾರಕಿ ವಿದ್ಯಾ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಹರಿಣಿ ವಂದಿಸಿದರು

Leave a Comment

error: Content is protected !!