September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ತಾಲೂಕು ಮರಾಟಿ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ನಾಯ್ಕ್ ನಿಧನ

ಹೊಸಂಗಡಿ: ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನದ ಬಡಕೋಡಿ ಇದರ ಜೀರ್ಣೋದ್ದಾರ ಮತ್ತು ಬ್ರಹ್ಮ ಕಲಶೋತ್ಸವದ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲೂಕು ಮರಾಠಿ ಸಂಘದ ಗೌರವ ಅಧ್ಯಕ್ಷರು ಮತ್ತು ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಇದರ ಸಕ್ರಿಯ ಸದಸ್ಯರು ಆಗಿರುವ ಲಿಂಗಪ್ಪ ನಾಯ್ಕ್(54ವರ್ಷ)ಬಡಕೋಡಿ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಅತ್ಯುತ್ತಮ ಸಂಘಟಕರಾದ ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇವರು ಚಿತ್ರ ಕಲಾವಿದರು ಆಗಿದ್ದರು. ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನ ಬಡಕೋಡಿ ಇದರ ಜೀರ್ಣೋದ್ದಾರ ಕಾರ್ಯದಲ್ಲಿ ಇವರ ಕೊಡುಗೆ ಅಪಾರವಾದುದು. ಸೆಂಟ್ರಲ್ ಮೆರೆಯಿನೆನ್ ಫಿಶೆರೀಸ್ ರೆಸೆರ್ಚ್ ಇನ್ಸ್ಟಿಟ್ಯೂಟ್ ಆಫ್ ಮಂಗಳೂರು (CMFRIM) ಇದರ ಕೃಷಿ ವಿಭಾಗದ ತಾಂತ್ರಿಕ ಅಧಿಕಾರಿಯಾಗಿದ್ದ ಇವರು ತಾಯಿ ಗುಲಾಬಿ, ಪತ್ನಿ ಹರಿಣಾಕ್ಷಿ ಮತ್ತು ಇಬ್ಬರು ಪುತ್ರಿಯರಾದ ಪ್ರತೀಕ್ಷಾ,ಅಪೇಕ್ಷಾ ಹಾಗೂ ಸಹೋದರಿಯರು ಮತ್ತು ಬಂಧು ಬಳಗದವರನ್ನು ಅಗಲಿದ್ದಾರೆ.

Related posts

ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಬೆಳ್ತಂಗಡಿ ಮಾಳವ ಯಾನೆ ಮಲ್ಲವರ ಯುವಕ ಮತ್ತು ಮಹಿಳಾ ಸಂಘದಿಂದ ‘ಕೆಸರಿನಲ್ಲಿ ಒಂದು ದಿನ’ ಕಾರ್ಯಕ್ರಮ

Suddi Udaya

ಮಾನಿಮಾರ್ ತಿಮ್ಮಪ್ಪ ಬಂಗೇರ ನಿಧನ

Suddi Udaya

ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಏಷ್ಯನ್ ಪೆಸಿಫಿಕ್ ಚಾಂಪಿಯನ್ ಶಿಪ್ ಯೋಗಾಸನ ಸ್ಪರ್ಧೆ: ಕೊಕ್ರಾಡಿ ಸ.ಪ್ರೌ. ಶಾಲೆಯ ಶಿಕ್ಷಕಿ ಶ್ರೀಮತಿ ಅಕ್ಕಮ್ಮ ರವರಿಗೆ ಚಿನ್ನದ ಪದಕ

Suddi Udaya

ಡಾ. ವಿಕ್ರಮ್ ತಿಮರಡ್ಕ ರವರಿಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ. ಪದವಿ

Suddi Udaya
error: Content is protected !!