April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಅಯೋಧ್ಯೆ ನಗರದ ಶ್ರೀ ರಾಮ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಫಲ್ಗುಣಿ ಮಹಿಳಾ ಮಂಡಳಿ ವತಿಯಿಂದ ರಾಮತಾರಕ ಮಂತ್ರ ಪಠಣ ಹಾಗೂ ಹರಿಕಥಾ ಸತ್ಸಂಗ

ಶಿರ್ಲಾಲು : ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣಪ್ರತಿಷ್ಠೆ ಹಾಗೂ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದ ಪ್ರಯುಕ್ತ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಫಲ್ಗುಣಿ ಮಹಿಳಾ ಮಂಡಳಿ ಶಿರ್ಲಾಲು ಇದರ ವತಿಯಿಂದ ರಾಮತಾರಕ ಮಂತ್ರ ಪಠಣ ಹಾಗೂ ಹರಿಕಥಾ ಸತ್ಸಂಗ ಕಾರ್ಯಕ್ರಮವು ಜ.22ರಂದು ನಡೆಯಲಿದೆ.

ಬೆಳಿಗ್ಗೆ 10ಗಂಟೆಗೆ ರಾಮ ತಾರಕ ಮಂತ್ರ ಪಠಣ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಸಾಮರಸ್ಯ ಸಹಸಂಚಾಲಕ ಶಿವಪ್ರಸಾದ್ ಮಲೆಬೆಟ್ಟು ಇವರಿಂದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ನಂತರ ಗ್ರಾಮದ ಕರಸೇವಕರಿಗೆ ಗೌರವಾರ್ಪಣೆ, ರಾತ್ರಿ 8.30 ರಿಂದ ಪಿ. ಗುರು ರಾಜ್ ಮತ್ತು ತಂಡ ಮಂಗಳೂರು ಇವರಿಂದ ಶ್ರೀರಾಮ ಪಾದುಕಾ ಪಟ್ಟಾಭಿಷೇಕ ಎಂಬ ಹರಿಕಥೆ ಕಾರ್ಯಕ್ರಮ ನಡೆಯಲಿದೆ.

Related posts

ಬಳಂಜ:ಎಲ್ಯೊಟ್ಟು ನಲ್ಲಿ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ

Suddi Udaya

ಬೆಳ್ತಂಗಡಿ ಜೈನ್ ಮಿಲನ್ ನ ಮಾಸಿಕ ಸಭೆ

Suddi Udaya

ಪೆರಿಂಜೆಯಲ್ಲಿ ಶ್ರೀ ಧ.ಮಂ.ಪ್ರೌ.ಶಾಲೆಯ ಎನ್ನೆನ್ನೆಸ್ ವಾರ್ಷಿಕ ಶಿಬಿರದ ಶಿಬಿರಜ್ಯೋತಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ವರ್ಷದ ಪ್ರಯುಕ್ತ ರಂಗಪೂಜೆ ಹಾಗೂ ಉತ್ಸವಾದಿಗಳು

Suddi Udaya

ಪಡಂಗಡಿ ಪ್ರಾ.ಕೃ.ಪ.ಸ. ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಾಧನ ಪ್ರಶಸ್ತಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಹಳೆ ವಿದ್ಯಾರ್ಥಿನಿಗೆ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!