32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅಡಿಕೆ ಸಮರ್ಪಣೆ

ಉರುವಾಲು: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅಡಿಕೆ ಸಮರ್ಪಣೆ ಕಾರ್ಯಕ್ರಮ ಜ.16ರಂದು ದೇವಾಲಯದ ವಠಾರದಲ್ಲಿ ನಡೆಯಿತು.

ಉರುವಾಲು, ಇಳಂತಿಲ, ಕಾರಿಂಜ, ಬೈತಾರ್, ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರ ವ್ಯಾಪ್ತಿಯ ಗ್ರಾಮಗಳು, ನಾಕಾಲು ಬೈಲು, ಹಲೇಜಿ, ಧರ್ಮಾಡಿ ಬೈಲು, ಓಂತ್ತಾಜೆ, ಕೊರಿಂಜ, ಉಳಿಯ, ಬರಮೇಲು, ಮುಂಡೊಟ್ಟು ಮತ್ತು ಮೊಗ್ರು ಭಾಗದ ಗ್ರಾಮಸ್ಥರು ದೇವಾಲಯಕ್ಕೆ ಅಡಿಕೆ ಸಮರ್ಪಣೆ ಮಾಡಿದರು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ಕಾರ್ಯದರ್ಶಿ ಸುನೀಲ್ ಅಣಾವು, ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ಪವಿತ್ರಪಾಣಿ ಹರೀಶ್ ಕಾಳಿಂಜ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ, ಕಾರ್ಯದರ್ಶಿ ವಿಜಯ ಕುಮಾರ್ ಕಲ್ಲಳಿಕೆ, ಕೋಶಾಧಿಕಾರಿ ಉದಯ ಕಾಳಿಂಜ, ಕಣಿಯೂರು ಗ್ರಾ.ಪಂ.ಅಧ್ಯಕ್ಷ ಯಶವಂತ್, ಇಳಂತಿಲ ಗ್ರಾ.ಪಂ.ಅಧ್ಯಕ್ಷ ತಿಮಪ್ಪ ಇಳಂತಿಲ, ತಣ್ಣೀರುಪಂತ ಗ್ರಾ.ಪಂ. ಸದಸ್ಯ ಸಾಮ್ರಾಟ್, ಚಪ್ಪರ ಸಮಿತಿಯ ದೇಜಪ್ಪ, ಮೊಕ್ತೇಸರರಾದ ಶಂಕರ ನಾರಾಯಣ ಭಟ್, ಆರ್ಥಿಕ ಸಮಿತಿ ಸಂಚಾಲಕ ಪ್ರಭಾಕರ ಗೌಡ ಪೊಸದೊಂಡಿ, ಅನಿತಾ ಕೇಶವ ಪೂಜಾರಿ, ವಾರಿಜ ವಿ. ಶೆಟ್ಟಿ, ದೇಜಪ್ಪ ಗೌಡ, ಜಲಜಾಕ್ಷಿ, ಕೇಶವತಿ, ಲಲಿತಾ, ಸೇಸಪ್ಪ ರೈ ಕೊರಿಂಜ, ಹೊರಕಾಣಿಕೆ ಸಮಿತಿಯ ಸಂಚಾಲಕ ಪ್ರವೀಣ್ ರೈ ಕುಪ್ಪೆಟ್ಟಿ, ರಂಜಿತ್ , ಅಲಂಕಾರ ಸಮಿತಿಯ ದೀಕ್ಷಿತ್ ಕುಕ್ಕಾಜೆ ಹಾಗೂ ಸುಶಾನ್ ರೈ ವಿವಿಧ ಸಮಿತಿಯ ಸಂಚಾಲಕರು, ಸಹಸಂಚಾಲಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related posts

ಸಿಯೋನ್ ಆಶ್ರಮ ಟ್ರಸ್ಟ್ ಮತ್ತು ಆಲ್‌ಕಾರ್ಗೋ ಲೋಜಿಸ್ಟಿಕ್ಸ್ ಲಿ. ಸಹಭಾಗಿತ್ವದೊಂದಿಗೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ

Suddi Udaya

ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮಂಗಳೂರು ಜಿಲ್ಲಾ ಸಮಿತಿಯ ಸಭೆ

Suddi Udaya

ಮಂಗಳೂರು ಕಥೋಲಿಕ್ ಸಭಾ ವತಿಯಿಂದ ಬೆಳ್ತಂಗಡಿ ಪತ್ರಕರ್ತ ಹೆರಾಲ್ಡ್ ಪಿಂಟೊ ರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಮಾ.1 : ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಪಕ್ಷ ಸಮಾವೇಶ

Suddi Udaya

ಧರ್ಮಸ್ಥಳ: ಕಾಲೇಜು ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

Suddi Udaya

ನಾಳ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ತಾಳಮದ್ದಳೆ

Suddi Udaya
error: Content is protected !!