ಉಜಿರೆ: ಭಾರತೀಯ ಜೈನ್‌ಮಿಲನ್ ಆಶ್ರಯದಲ್ಲಿ ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ ಫೆ. 3 ಮತ್ತು 4 ರಂದು ಕಾರ್ಕಳದಲ್ಲಿ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರವನ್ನು ಜ.15 ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಭಾರತೀಯ ಜೈನ್‌ಮಿಲನ್‌ನ ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ಕಾರ್ಯದರ್ಶಿ ಶುಭಾಶ್ಚಂದ್ರ ಜೈನ್, ಯುವರಾಜ ಬಲಿಪ, ಸೋಮಶೇಖರ ಶೆಟ್ಟಿ, ಪ್ರಮೋದ್ ಕುಮಾರ್ ಉಜಿರೆ, ಶ್ರೀವರ್ಮ ಅಜ್ರಿ, ಮೂಡಬಿದ್ರೆಯ ನೋಟರಿ ಶ್ವೇತಾ ಜೈನ್, ಕಾರ್ಕಳದ ಶಶಿಕಲಾ ಹೆಗ್ಡೆ, ಮಾಲತಿವಸಂತರಾಜ್ ಮತ್ತು ಯೋಗರಾಜ ಶಾಸ್ತ್ರಿ ಉಪಸ್ಥಿತರಿದ್ದರು.
ಧರ್ಮಸ್ಥಳದ ಹೇಮಾವತಿ ಹೆಗ್ಗಡೆಯವರನ್ನು ಆಮಂತ್ರಿಸಲಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುದರ್ಶನ್ ಜೈನ್ ಬಂಟ್ವಾಳ, ಕಾರ್ಕಳದಲ್ಲಿ ಯುಗಲ ಮುನಿಗಳಾದ ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು ಮತ್ತು ಪೂಜ್ಯ ಅಮರಕೀರ್ತಿ ಮುನಿಮಹಾರಾಜರು ಹಾಗೂ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಫೆ. 3 ರಂದು ಶನಿವಾರ ಪೂರ್ವಾಹ್ನ ಗಂಟೆ 9.30 ಕ್ಕೆ ಆನೆಕೆರೆ ಬಸದಿಯಿಂದ ಭವ್ಯ ಮೆರವಣಿಗೆ ಬಳಿಕ ಭಾರತೀಯ ಜೈನ್‌ಮಿಲನ್‌ನ ರಾಷ್ಟಿçÃಯ ಕಾರ್ಯಧ್ಯಕ್ಷರಾದ ಧರ್ಮಸ್ಥಳದ ಸುರೇಂದ್ರಕುಮಾರ್ ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆ ಉದ್ಘಾಟಿಸುವರು ಎಂದು ತಿಳಿಸಿದರು.
ಶನಿವಾರ ಉಪಾಂತ್ಯ ಸ್ಪರ್ಧೆಗಳು ಹಾಗೂ ಭಾನುವಾರ ಅಂತಿಮ ಸ್ಪರ್ಧೆಗಳು ನಡೆಯಲಿವೆ.