ಸುಲ್ಕೇರಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಪಂಚಾಯತ್ ಅದ್ಯಕ್ಷೆ ಗಿರಿಜಾರವರ ಅಧ್ಯಕ್ಷತೆಯಲ್ಲಿ ಜ.18 ರಂದು ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಉಪವಲಯಾರಣ್ಯಧಿಕಾರಿ ಸುರೇಶ್ ಗೌಡ ಸಭೆಯನ್ನು ನಡೆಸಿಕೊಟ್ಟರು.
ಗ್ರಾಮಸಭೆಯಲ್ಲಿ ಗರ್ಭಿಣಿಯರು, ಬೆನ್ನುನೋವಿದ್ದರು ಅಳದಂಗಡಿ ಅರೋಗ್ಯ ಕೇಂದ್ರದ ರಸ್ತೆಯಲ್ಲಿ ಸಾಗಿದರೆ ಸಮಸ್ಯೆ ಗ್ಯಾರಂಟಿ ಆದಷ್ಟು ಬೇಗ ಅಳದಂಗಡಿ ಆರೋಗ್ಯ ಕೇಂದ್ರಕ್ಕೆ ಹೋಗುವ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಸುಲ್ಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆಯಿದ್ದು ಟವರ್ ನಿರ್ಮಿಸಬೇಕು,ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದು, ದಾರಿದೀಪ ವಿಸ್ತರಣೆ, ರಸ್ತೆ ರಿಪೇರಿ, ಶುದ್ದ ನೀರಿನ ಘಟಕದ ನಿರ್ವಹಣೆ ಹಾಗೂ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮಸ್ಥರು ಚರ್ಚಿಸಿದರು.
ಗ್ರಾಮಸ್ಥರ ಪರವಾಗಿ ವೀರೇಂದ್ರ ಜೈನ್, ವಿಶ್ವನಾಥ ಶೆಟ್ಟಿ, ಸದಾನಂದ ಗೌಡ ಮಜ್ಜೋಡಿ ಚರ್ಚಿಸಿದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಶುಭಕರ ಪೂಜಾರಿಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ,ಗ್ರಾ.ಪಂ ಸದಸ್ಯರಾದ ರವಿ ಪೂಜಾರಿ ಹಾರಡ್ಡೆ,ನಾರಾಯಣ ಪೂಜಾರಿ ಸುಲ್ಕೇರಿ,ಪೂರ್ಣೀಮಾ ನಾವರ,
ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ ನಾಯ್ಕ್,ಸಿಬ್ಬಂದಿಗಳು ಸಹಕರಿಸಿದರು.ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯ ಹಾಗೂ ಮಾಹಿತಿ ನೀಡಿದರು.