April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕ್ಷುಲಕ ವಿಚಾರದಲ್ಲಿ ಮಕ್ಕಳ ಜೊತೆ ಗಲಾಟೆ: ಬೆಂಗಳೂರಿನ ವೃದ್ಧ ಧಮ೯ಸ್ಥಳಕ್ಕೆ ಬಂದು ಖಾಸಗಿ ಲಾಡ್ಜ್ ನಲ್ಲಿ ವಿಷಸೇವಿಸಿ ಆತ್ಮಹತ್ಯೆ

ಧರ್ಮಸ್ಥಳ: ಮನೆಯಲ್ಲಿ ಕ್ಷುಲಕ ವಿಚಾರದಲ್ಲಿ ಮಕ್ಕಳ ಜೊತೆ ಗಲಾಟೆ ನಡೆದಿದ್ದು. ನಂತರ ಐದು ಮಕ್ಕಳ ತಂದೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಖಾಸಗಿ ಲಾಡ್ಜ್ ನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸಕಾಲಕ್ಕೆ ಧರ್ಮಸ್ಥಳ ಪೊಲೀಸರು ಆಸ್ಪತ್ರೆಗೆ ಸೇರಿ ಒಂದು ದಿನದ ಬಳಿಕ ವೃದ್ಧ ಸಾವನ್ನಪ್ಪಿದ್ದ ಘಟನೆ ನಡೆದಿದೆ.

ಘಟನೆ ವಿವರ: ಬೆಂಗಳೂರು ಉತ್ತರದ 06, 13 ನೇ ‘ಎ’ ಕ್ರಾಸ್, ಹೊಯ್ಸಳ ನಗರ, ಸುಂಕದಕಟ್ಟೆ ನಿವಾಸಿ ದಿ.ವೆಂಕಪ್ಪ ಯಾನೆ ಅಪ್ಪಣ್ಣ ಎಂಬವರ ಮಗನಾದ ಹೆಚ್.ವಿ.ಚಂದ್ರಶೇಖರ್ (89) ಎಂಬವರ ಮನೆಯಲ್ಲಿ ಕ್ಷುಲಕ ವಿಚಾರದಲ್ಲಿ ಗಲಾಟೆ ನಡೆದಿದೆ.ಈ ಗಲಾಟೆಯಿಂದ ನೊಂದು ಮನೆಬಿಟ್ಟು ಬೆಂಗಳೂರಿನಿಂದ ಬಸ್ ಮೂಲಕ ಧರ್ಮಸ್ಥಳಕ್ಕೆ ಬಂದು ನಂತರ ಜ.17 ರಂದು ಖಾಸಗಿ ಲಾಡ್ಜ್ ನಲ್ಲಿ ರೂಂ ಪಡೆದು, ರೂಂ ನಲ್ಲಿ ವಿಷ ಸೇವಿಸಿದ್ದಾರೆ.ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ರೂಂ ಬಾಯ್ ನೋಡಿ ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ತಕ್ಷಣ ಧರ್ಮಸ್ಥಳ ಪೊಲೀಸ್‌ ಠಾಣೆಯ ಸಬ್ ಇನ್ಸೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಜ.18 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.

ಧರ್ಮಸ್ಥಳ ಪೊಲೀಸರು ಮೃತಪಟ್ಟ ವೃದ್ಧನ ಬ್ಯಾಗ್ ನಲ್ಲಿದ್ದ ಚೀಟಿ ಹಾಗೂ ಆಧಾರ್ ಕಾರ್ಡ್ ಮೂಲಕ ಮನೆಯವರನ್ನು ಮಕ್ಕಳನ್ನು ಸಂಪರ್ಕಿಸಿದರೂ ಯಾರು ಕೂಡ ಮೃತದೇಹ ಪಡೆದುಕೊಳ್ಳಲು ನಿರಾಕರಿಸಿದ್ದು, ಮೃತದೇಹ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಇದೆ.

Related posts

ಫೆ.6 ರಿಂದ ಫೆ.17 ರವರೆಗೆ ತಾಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ- ಸ್ತಬ್ದಚಿತ್ರ ಸಂಚಾರ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕ್ರಿಟಿಕಲ್ ಫಂಡ್ ಚೆಕ್ ವಿತರಣೆ

Suddi Udaya

ಆ.11: ಮಡಂತ್ಯಾರಿನಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿ’ ಸೋಜ ರವರಿಗೆ ಅಭಿನಂದನಾ ಸಮಾರಂಭ ಹಾಗೂ ಮಾಹಿತಿ ಕಾರ್ಯಾಗಾರ

Suddi Udaya

ಬಳಂಜ: ಉದ್ಯಮಿ, ಕೃಷಿಕ ರಾಕೇಶ್ ಹೆಗ್ಡೆಯವರ ಇಕೋಫ್ರೆಶ್ ಫಾರ್ಮ್ ನಲ್ಲಿ ಬೆಳೆದ ಪ್ರಥಮ ಬೆಳೆ: ಡ್ರ್ಯಾಗನ್ ಫ್ರೂಟ್ ನ್ನು ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ, ಫ್ರೂಟ್ ಸವಿದು ಸಂಭ್ರಮಿಸಿದ ವಿದ್ಯಾರ್ಥಿಗಳು

Suddi Udaya

ಡಿ.18: ತೋಟತ್ತಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

Suddi Udaya

ಬೆಳ್ತಂಗಡಿಯಲ್ಲಿ ‘ಮಾದಕ ವಸ್ತು ತಡೆ ಜಾಗೃತಿ ಬೃಹತ್ ಕಾಲ್ನಡಿಗೆ ಜಾಥಾ’

Suddi Udaya
error: Content is protected !!