ಕೊಯ್ಯೂರು : ಇಲ್ಲಿಯ ಸುದೆಮುಗೇರು ಎಂಬಲ್ಲಿ, ಸೋಮಾವತಿ ನದಿ ಕಿನಾರೆಯಿಂದ ಹಿಟಾಚಿ ಬಳಸಿ, ಮರಳು ಕಳವು ಮಾಡಿ ಮಾರಾಟಕ್ಕಾಗಿ ಸಾಗಾಟ ಮಾಡಲು ತಯಾರು ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳ ಸಹಿತ ಸ್ಥಳದಲ್ಲಿದ್ದ ಅಂದಾಜು ಒಟ್ಟು ರೂ 23,56,000/- ಮೌಲ್ಯದ ವಾಹನ ಹಾಗೂ ಅಂದಾಜು ರೂ 3,000/- ಮೌಲ್ಯದ ಮರಳನ್ನು ವಶಪಡಿಸಿಕೊಂಡ ಘಟನೆ ಜ.19ರಂದು ನಡೆದಿದೆ.
ಜ.19 ರಂದು ಸಂಜೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಸುದೆಮುಗೇರು ಎಂಬಲ್ಲಿ, ಸೋಮಾವತಿ ನದಿ ಕಿನಾರೆಯಿಂದ ಹಿಟಾಚಿ ಬಳಸಿ, ಮರಳು ಕಳವು ಮಾಡಿ ಮಾರಾಟಕ್ಕಾಗಿ ಸಾಗಾಟ ಮಾಡಲು ತಯಾರು ಮಾಡುತ್ತಿದ್ದಾಗ, ಮುರಳಿಧರ ನಾಯ್ಕ ಕೆ.ಜೆ , ಪಿಎಸ್ಐ (ಕಾ&ಸು) ಬೆಳ್ತಂಗಡಿ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ್ದು, ಆರೋಪಿಗಳಾದ ಬಿ. ರಹೀಮ್, ನಾಸೀರುದ್ದೀನ್ @ ನಾಸಿರ್ , ಸಂಶುದ್ದೀನ್ ಮತ್ತು ಅಬ್ದುಲ್ ಮಜೀದ್ ಎಂಬವರುಗಳು ನದಿ ಕಿನಾರೆಗೆ ಜಾಲರಿ ಅಳವಡಿಸಿ, ಹಿಟಾಚಿ ಬಳಸಿ, ನಂಬ್ರ ಕೆಎ 12 ಬಿ 4805 ಟಿಪ್ಪರ್ ಲಾರಿಯಲ್ಲಿ ಚರಳು ಮಿಶ್ರಿತ ಮರಳು ಕಳ್ಳತನ ಮಾಡಿ ಮಾರಾಟಕ್ಕಾಗಿ ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದುದನ್ನು ಪತ್ತೆ ಮಾಡಿರುತ್ತಾರೆ. ಸ್ಥಳದಲ್ಲಿದ್ದ ಅಂದಾಜು ಒಟ್ಟು ರೂ 23,56,000/- ಮೌಲ್ಯದ ವಾಹನ ಹಾಗೂ ಅಂದಾಜು ರೂ 3,000/- ಮೌಲ್ಯದ ಮರಳನ್ನು ಸ್ವಾಧೀನಪಡಿಸಿ ಆರೋಪಿಗಳ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 04/2024 ಕಲಂ: 379 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.