ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಉಪ್ಪಾರಪಳಿಕೆ ಕಾರ್ಯಕ್ಷೇತ್ರದ ವಿಶ್ವಜ್ಯೋತಿ ಜ್ಞಾನವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಉಪ್ಪಾರಪಳಿಕೆ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಡಾ / ತಾರಾ ಮೇಡಂ ರವರು ಮಹಿಳೆ ಕುಟುಂಬದ ಶಕ್ತಿ ಎಲ್ಲರ ಬದುಕಿನಲ್ಲಿ ಮಹಿಳೆ ಪ್ರಮುಖ ಸ್ಥಾನ ಪಡೆದಿದ್ದಾಳೆ. ಮಾತೃಶ್ರೀ ಹೇಮಾವತಿ ಅಮ್ಮನವರು ಮಹಿಳೆಯರ ಅಭಿವೃದ್ಧಿಗಾಗಿ ಪ್ರಾರಂಭಿಸಿದ ಜ್ಞಾನ ವಿಕಾಸ ಕೇಂದ್ರದ ಮೂಲಕ ಬಹಳಷ್ಟುಮಾಹಿತಿಯನ್ನು ಪಡ್ಕೊಂಡು ಪ್ರಬುದ್ಧರಾಗಲು ಸಾಧ್ಯವಾಗಿದೆ ಎಂದರು.
ಶಾಲೆಯ ಮುಖ್ಯ್ಯೊಪಾಧ್ಯಾಯರಾದ ಸರಸ್ವತಿ ಮೇಡಂ ಗ್ರಾಮಾಭಿವೃದ್ಧಿ ಯೋಜನೆಯ ಯಾವುದೇ ಕಾರ್ಯಕ್ರಮಗಳು ಉತ್ತಮ ರೀತಿ ನಡೆಯುತ್ತಿದೆ ಜ್ಞಾನವಿಕಾಸ ಕೇಂದ್ರವು ಪ್ರತಿಭೆಗಳನ್ನು ಹೊರ ಹಾಕಲು ಮಹಿಳೆಯರಿಗೆ ಒಂದು ಉತ್ತಮ ವೇದಿಕೆಯಾಗಿದೆ ಮಾತೃಶ್ರೀ ಹೇಮಾವತಿ ಅಮ್ಮನವರು ಹಮ್ಮಿಕೊಂಡ ಈ ಜ್ಞಾನ ವಿಕಾಸ ಕಾರ್ಯಕ್ರಮದಿಂದ ಅದೆಷ್ಟು ಮಹಿಳೆಯರಿಗೆ ವಿವಿಧ ಮಾಹಿತಿಗಳನ್ನು ಪಡೆಯಲು ಅವಕಾಶ ಸಿಕ್ಕಿದೆ ಮಹಿಳೆಯರು ಕುಟುಂಬದ ಸದಸ್ಯರ ಅಭಿವೃದ್ಧಿಯೊಂದಿಗೆ ತಮ್ಮ ಅರೋಗ್ಯದ ಕಡೆ ಗಮನವನ್ನು ಕೊಡಬೇಕು ಎಂದರು.
ತಾಲೂಕಿನ ಗೌರವಾನ್ವಿತ ಯೋಜನಾದಿಕಾರಿಯವರಾದ ಸುರೇಂದ್ರರವರು ಜ್ಞಾನ ವಿಕಾಸ ಕಾರ್ಯಕ್ರಮದ ದ್ಯೇಯೋದ್ದೇಶಗಳ ಬಗ್ಗೆ ತಿಳಿಸುತ್ತಾ ಉತ್ತಮ ಹಾಜರಾತಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ವಲಯಾಧ್ಯಕ್ಷರು ಅಧ್ಯಕ್ಷರು ಮೇಲ್ವಿಚಾರಕರಾದ ಭಾಗೀರಥಿ ಮೇಡಂ ಜ್ಞಾನವಿಕಾಸ ಸಮನ್ವಯಧಿಕಾರಿಯವರಾದ ಮಧುರಾರವರು ಸೇವಾಪ್ರತಿನಿದಿ ರೋಹಿಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಶ್ರೀಮತಿ ಪದ್ಮಾವತಿಯವರು ವಹಿಸಿದ್ದರು. ಕುಸುಮರವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಭವಾನಿ ಯವರು ಸ್ವಾಗತಿಸಿ ಯಮುನಾವರು ಧನ್ಯವಾದ ಮಾಡಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.