ಅಯ್ಯೋಧ್ಯೆ ಶ್ರೀ ರಾಮಲಲ್ಲಾನ ಪ್ರತಿಷ್ಟೆ ನಾಳ ದೇವಸ್ಥಾನದಲ್ಲಿ ನೇರಪ್ರಸಾರ, ಭಜನೆ, ಕರಸೇವಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಹನಮಾನ್ ಚಾಲಿಸ್ ಹಾಗೂ 1008 ರಾಮ ತಾರಕ ಮಂತ್ರ ಮತ್ತು ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.ಹಾಗೂ ದೇವರಿಗೆ ವಿಶೇಷ ಪೂಜೆ ಜರುಗಿತು.

ಈ ಹಿಂದೆ ಅಯ್ಯೋಧ್ಯೆಯಲ್ಲಿ ಕರಸೇವಕರಾಗಿ ಸೇವೆಸಲ್ಲಿಸಿದ ದಯಾನಂದ ಗೌಡ ಕಲ್ಕುರ್ಣಿ,ಪ್ರಭಾಕರ ಆಚಾರ್ಯ ಗೇರುಕಟ್ಟೆ,ರವಿ ಮಣಿಯಾಣಿ ಗೇರುಕಟ್ಟೆ ಅವರನ್ನು ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಿದರು. ಸುಧಾಕರ ನಾಯ್ಕ್ ಹೀರ್ಯ ಅನುಪಸ್ಥಿತಿಯಲ್ಲಿ ಸಹೋದರ ದಯರಾಜ್ ಕೆ.ಪಿ.ಯವರನ್ನು ಹಾಗೂ ಕೆತ್ತನೆಯ ಕೆಲಸ ಮಾಡಿದ ಜಯಚಂದ್ರ ಆಚಾರ್ಯರ ಅನುಪಸ್ಥಿತಿಯಲ್ಲಿ ತಾಯಿ ಶ್ರೀಮತಿ ಲಲಿತ ಶಾಮರಾಯ್ ಆಚಾರ್ಯ ನಾಳ ಅವರನ್ನು ಸನ್ಮಾನಿಸಿ ಗೌರವಿಸಿದರು.

ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ.ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ, ವ್ಯವಸ್ಥಾಪನ ಸಮಿತಿ ಸದಸ್ಯ ವಸಂತ ಮಜಲು,ದೇವಸ್ಥಾನದ ಪ್ರಧಾನ ಆರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಂಬಾ ಅಳ್ವ,ದಿನೇಶ್ ಗೌಡ ಕೆ.ರಾಜೇಶ್ ಶೆಟ್ಟಿ. ಅಭಿವೃದ್ಧಿ ಮಂಡಳಿ ಅಧ್ಯಕ್ಷ ಯಾದವ ಗೌಡ, ಕಾರ್ಯದರ್ಶಿ ರಾಜೇಶ್ ಪೆಂರ್ಬುಡ,ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಲೋಕೇಶ್ ಆಚಾರ್ಯ, ಎನ್.ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ, ಸ್ಥಳೀಯರಾದ ವೆಂಕಟೇಶ್ವರ ಭಟ್,ಡಾ.ಅನಂತ್ ಭಟ್,ಉದ್ಯಮಿ ವೆಂಕಟರಮಣ ಪೈ, ಜಾತ್ರೋತ್ಸವ ಸಮಿತಿ ಸದಸ್ಯರಾದ ಸುರೇಶ್ ಅರ್.ಎನ್.ಅಶೋಕ್ ಆಚಾರ್ಯ,ಸತೀಶ್ ಭಂಡಾರಿ,ಜಯಚಂದ್ರ ಆಚಾರ್ಯ,ಶಶಿಧರ ಶೆಟ್ಟಿ,
ಚಂದಯ್ಯ ಶೆಟ್ಟಿ, ಪೂವಪ್ಪ ಶೆಟ್ಟಿ,ದೇವಸ್ಥಾನದ ಪ್ರಭಂದಕ ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಭಕ್ತರು ಆಗಮಿಸಿದರು. ನಾಳ ದೇವಸ್ಥಾನದ ವಿವಿಧ ಸಮಿತಿಯವರು ಪೂರ್ಣ ಸಹಕಾರ ನೀಡಿದರು.

Leave a Comment

error: Content is protected !!