April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಬೆಳ್ತಂಗಡಿಯ ರಾಮ ಕ್ಷತ್ರಿಯ ಸಂಘದಿಂದ ರಾಮೋತ್ಸವ

ಬೆಳ್ತಂಗಡಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಹಾಗೂ ರಾಮನ ಪ್ರತಿಷ್ಠಾಪನೆಯ ಅಂಗವಾಗಿ ಬೆಳ್ತಂಗಡಿಯ ರಾಮ ಕ್ಷತ್ರಿಯ ಸಂಘ, ರಾಮ ಕ್ಷತ್ರಿಯ ಮಹಿಳಾ ವೃಂದ, ರಾಮ ಕ್ಷತ್ರಿಯ ಯುವ ಸಂಘ ಮತ್ತು ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಹಯೋಗದಲ್ಲಿ ಬೆಳ್ತಂಗಡಿಯ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆವರಣದಲ್ಲಿ, ಶ್ರೀ ರಾಮ ಪೂಜೆ, ಭಜನೆ, ಸಂಗೀತದೊಂದಿಗೆ, 1992 ರಲ್ಲಿ ಅಯೋಧ್ಯೆಯಲ್ಲಿ ಕರ ಸೇವೆಯಲ್ಲಿ ಭಾಗವಹಿಸಿದ್ದ ವೇಣುಗೋಪಾಲ್ ರವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಾಲ್ಕು ಸಂಸ್ಥೆಯ ಅಧ್ಯಕ್ಷರು, ಚಂದ್ರಕಾಂತ, ಶ್ರೀಮತಿ ಕಲಾವತಿ ,ಲಿಖಿತ್, ಪ್ರಭಾಕರ ಸಿ ಹೆಚ್, ಸ್ಥಾಪಕ ಅಧ್ಯಕ್ಷ ವಿಶ್ವನಾಥ ಆರ್ ನಾಯಕ್, ವಿಜಯ ಕುಮಾರ್, ಮುಂತಾದವರು ಭಾಗವಹಿಸಿದ್ದರು.

ಪ್ರಮೋದ್ ಆರ್ ನಾಯಕ್ ರವರು ಕಾರ್ಯಕ್ರಮ ನಿರೂಪಿಸಿದರು. ಸುಮಾರು 100 ಕ್ಕೂ ಅಧಿಕ ಸಮಾಜ ಬಾಂಧವರು ಭಾಗವಹಿಸಿ, ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳನ್ನು ಎಲ್ಲರಿಗೂ ವಿತರಿಸಿ, ಸಂಭ್ರಮದಿಂದ ಆಚರಿಸಿದರು. ಕಾರ್ಯದರ್ಶಿ ಸಂತೋಷ್ ಕುಮಾರ್ ವಂದಿಸಿದರು.

Related posts

ಬೆಳಾಲು ಪ್ರೌಢಶಾಲಾ ಮಕ್ಕಳಿಂದ ಬಳಂಜ ಫಾರ್ಮ್ ಭೇಟಿ

Suddi Udaya

ಕಳೆಂಜ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರಿಂದ ಸೋರುತಿದ್ದ ಮನೆಯ ಮೇಲ್ಛಾವಣಿಗೆ ಟಾರ್ಪಲ್ ಅಳವಡಿಕೆ

Suddi Udaya

ಕಕ್ಕಿಂಜೆ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಪೊಲೀಸರ ವಶ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ

Suddi Udaya

ಸೋಣಂದೂರು ಶಾಲೆಗೆ ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ವತಿಯಿಂದ ಧ್ವನಿವರ್ಧಕ ಕೊಡುಗೆ

Suddi Udaya

ಉಜಿರೆ: ಜಿ.ಪಂ ಮಾಜಿ ಸದಸ್ಯ ತುಂಗಪ್ಪ ಗೌಡ ಮರಕಡ ನಿಧನ

Suddi Udaya
error: Content is protected !!