April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಯೋಧ್ಯೆ ಸಂಭ್ರಮಾಚರಣೆ ಸಂದರ್ಭ ಬಡಗಕಾರಂದೂರು ಗ್ರಾಮದ ಬಿಕ್ಕಿರ ನಿವಾಸಿಗಳಿಂದ ತಮ್ಮ ವಾಸಸ್ಥಳದ ಪರಿಸರವನ್ನು ರಾಮನಗರ ಎಂಬ ನಾಮಕರಣ

ಅಳದಂಗಡಿ: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ಶುಭ ಸಂಧರ್ಭದಲ್ಲಿ ಬಡಗಕಾರಂದೂರು ಗ್ರಾಮದ ಬಿಕ್ಕಿರ ನಿವಾಸಿಗಳು ತಮ್ಮ ವಾಸಸ್ಥಳದ ಪರಿಸರವನ್ನು ರಾಮನಗರ ಎಂಬ ಹೆಸರಿನಿಂದ ಪರಿಚಯಿಸಿಕೊಂಡರು.

ಶ್ರೀರಾಮ ದೇವರ ಜಯಘೋಷದೊಂದಿಗೆ ಶ್ಯಾಮಸುಂದರ್ ಭಟ್ ರವರ ಉಪಸ್ಥಿತಿಯಲ್ಲಿ ರಾಮಜ್ಯೋತಿಯನ್ನು ಬೆಳಗಿಸಿ ರಾಮ ನಗರವೆಂಬ ಹೆಸರನ್ನು ಉದ್ಘೋಷಿಸಲಾಯಿತು.

ದೀಪ ಪ್ರಜ್ವಲಿಸಿ ಮಾತನಾಡಿದ ಶ್ಯಾಮಸುಂದರ್ ಭಟ್ ರವರು ಎರಡು ಲೋಕಸಭೆಯ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ಕೊಟ್ಟ ಎರಡು ಮತಗಳು ಸನಾತನಿಗಳ ಪಾವನ ಕ್ಷೇತ್ರಗಳಾದ ಕಾಶಿ ಮತ್ತು ಅಯೋಧ್ಯೆಯ ರಾಮಜನ್ಮಭೂಮಿಯನ್ನು ಪಡೆಯುವಲ್ಲಿ ಸಫಲವಾದವು 2024 ಲೋಕಸಭೆಯ ಚುನಾವಣೆಯಲ್ಲಿ ಮೋದಿಯವರಿಗೆ ಕೊಡುವ ಇನ್ನೊಂದು ಮತವು ಭಗವದ್ಭಕ್ತರಿಗೆ ಮಥುರೆಯನ್ನು ಒದಗಿಸಿ ಕೊಡುವಂತಾಗಲಿ ಎಂದು ಹಾರೈಸಿದರು.

ಪ್ರಗತಿಪರ ಕೃಷಿಕ ಜಗದೀಶ್ ರೈ ಹಾನಿಂಜರವರು ಮಾತನಾಡಿ ಮೋದಿಜಿಯವರ ಸದೃಢ ನೇತ್ರತ್ವದಿಂದಾಗಿ ಅಯೋಧ್ಯೆಯಲ್ಲಿ ರಾಮಭಕ್ತರು ರಾಮ ಮಂದಿರ ನೋಡುವಂತಾಯ್ತು, ರಾಷ್ಟ್ರೋತ್ಥನದ ಸತ್ಕಾರ್ಯಕ್ಕಾಗಿ ಮುಂದಿನ ಚುನಾವಣೆಯಲ್ಲಿ ಮೋದಿಜಿಯವರ ಬೆಂಬಲಕ್ಕೆ ನಿಂತು ರಾಷ್ಟ್ರ ಸೇವೆಗಾಗಿ ಇನ್ನಷ್ಟು ಶಕ್ತಿ ತುಂಬಬೇಕೆಂದು ಕರೆ ನೀಡಿದರು.

ಕುlತೃಷಾ ಆಚಾರ್ಯ ಮತ್ತು ಕುl ವೈಷ್ಣವಿ ಆಚಾರ್ಯರಿಂದ ಪ್ರಾರ್ಥನೆಯ ಬಳಿಕ ಚಿರಾಗ್ ಶೆಟ್ಟಿಯವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಮೋಹನ ದಾಸ್ ರವರು ಕಾರ್ಯಕ್ರಮ ನಿರೂಪಿಸಿದರು.. ಪ್ರಶಾಂತ್ ಶೆಟ್ಟಿ, ಮೋಹನ್ ಕುಲಾಲ್(ನಿವೃತ್ತ ಯೋಧ) ಸದಾಶಿವ ಶೆಟ್ಟಿ, ಜನ ಪ್ರತಿನಿಧಿ ಕೃಷ್ಣಪ್ಪ ಬಿಕ್ಕಿರ, ಪ್ರತೀಕ್ ಶೆಟ್ಟಿ ನೊಚ್ಚ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ರೂವಾರಿಗಳಾಗಿ ಬಿಕ್ಕಿರ ರಾಮನಗರ ನಿವಾಸಿಗಳಾದ ಚಿರಾಗ್ ಶೆಟ್ಟಿ, ಪ್ರದೀಪ್ ಆಚಾರ್ಯ, ಪ್ರಕಾಶ್ ಆಚಾರ್ಯ, ಪ್ರಸಾದ್ , ಶರತ್, ಮನೋಜ್ ,ಹರೀಶ್ ಕುಲಾಲ್, ಸಂದೀಪ್,ರಕ್ಷಿತ್ ರವರು ಶ್ರಮಿಸಿದರು . ಸುಬ್ರಹ್ಮಣ್ಯ ಆಚಾರ್ಯ ಪಾಲಬೆ , ಲತೇಶ್ ದೇವಾಡಿಗ , ರಾಜು ಶೆಟ್ಟಿ ಹೊಸಮನೆ ,ಪೂರ್ಣೇಶ್ ಕಾಪಿನಡ್ಕ, ದೇವದಾಸ್ ಸಾಲ್ಯಾನ್ , ವಾಸುದೇವ ಆಚಾರ್ಯ, ಪ್ರಭಾಕರ್ ಆಚಾರ್ಯ,ನವೀನ್ ಆಚಾರ್ಯ, ಯಶೋಧರ ಸುವರ್ಣ , ಸಹಿತ ಸಮಸ್ತ ಸ್ಥಳೀಯ ನಿವಾಸಿಗಳು ಹಾಜರಿದ್ದರು. ಪ್ರತೀಕ್ ಶೆಟ್ಟಿಯವರು ನೆರೆದ ಶ್ರೀರಾಮ ಭಕ್ತರಿಗೆ ಧನ್ಯವಾದ ಸಮರ್ಪಿಸಿದರು. ಉಪಹಾರದ ಹಂಚಿಕೆಯೊಂದಿಗೆ “ರಾಮ ನಗರ” ನಾಮನಿರ್ದೇಶನ ಕಾರ್ಯಕ್ರಮ ಮುಕ್ತಾಯವಾಯಿತು.

Related posts

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಾರಾವಿ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ವಸಂತ ಬಂಗೇರ ಅವರ ನಿಧನಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟರಿಂದ ಸಂತಾಪ

Suddi Udaya

ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದಿಂದ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಕೊಡುಗೆ

Suddi Udaya

ವೇಣೂರು ದ್ವಿಚಕ್ರ ವಾಹನಗಳ ಹೋಂಡಾ ಶೋರೂಮ್ ಉದ್ಘಾಟನೆ

Suddi Udaya

ದೇಶಭಕ್ತಿ ಗೀತೆ ಸ್ಪರ್ಧೆ: ಉಜಿರೆ ಶ್ರೀ. ಧ. ಮಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಸೆ.10: ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಧಾರ್ಮಿಕ ಕಾರ್ಯಕ್ರಮ, ಮುದ್ದು ಕೃಷ್ಣ ಸ್ಪರ್ಧೆ, ವಿವಿಧ ಆಟೋಟ ಸ್ಪರ್ದೆಗಳು

Suddi Udaya
error: Content is protected !!