ಉಜಿರೆ: ದೇಶದ ಶಾಲಾ ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವ ಮತ್ತು ಅವರನ್ನು ವಿಜ್ಞಾನಿಗಳನ್ನಾಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಮ್ಮಿಕೊಂಡಿದ್ದ 31ನೇ ರಾಜ್ಯಮಟ್ಟದ ವಿಜ್ಞಾನ ಸಮಾವೇಶವು ಕಲಬುರ್ಗಿ ಜಿಲ್ಲೆ ಸೇಡಮ್ ನ ಶ್ರೀ ಕೊತ್ತಲ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಜರುಗಿತು.
ಈ ಸಮಾವೇಶದಲ್ಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಉಜಿರೆ(ರಾಜ್ಯ ಪಠ್ಯಕ್ರಮ)ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿಗಳಾದ ಅಧೀಷ್ ಬಿ. ಸಿ. ಮತ್ತು ಆಲಾಪ್ ಇವರು ಗ್ರಾಮೀಣ ಹಿರಿಯ ವಿಭಾಗದಲ್ಲಿ “Value addition for agri wastes and weeds” ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿರುತ್ತಾರೆ. ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಾದ ಸಚಿನ್ ಭಟ್ ಮತ್ತು ಸುಜನ್ ಗೌಡ ಇವರು ಗ್ರಾಮೀಣ ಕಿರಿಯ ವಿಭಾಗದಲ್ಲಿ “Value Added products of unused Banana fibres” ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿರುತ್ತಾರೆ.
ಈ ಎರಡು ತಂಡಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತವೆ.
ಈ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತ ಒಟ್ಟು 121 ತಂಡಗಳು ಭಾಗವಹಿಸಿದ್ದವು.
ಇವರಿಗೆ ಶಿಕ್ಷಕಿಯರಾದ ಶ್ರೀಮತಿ ಧನ್ಯವತಿ ಮತ್ತು ಶ್ರೀಮತಿ ಶೋಭಾ ಎಸ್ ಇವರು ಸಹಕರಿಸಿರುತ್ತಾರೆ. ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾ ಲಕ್ಷ್ಮಿ ಎನ್. ನಾಯಕ್ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.