ಗುರುವಾಯನಕೆರೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆಯ ದಿನವಾದ ಜ.22ರಂದು ಕುವೆಟ್ಟು ಗ್ರಾಮದ ಗುರುವಾಯನಕೆರೆ ಎರ್ಡೂರು ಬಳಿಯ ಹಲವು ಮನೆಗಳಿರುವ ಪ್ರದೇಶಕ್ಕೆ “ಶ್ರೀರಾಮನಗರ” ಎಂಬ ನೂತನ ಹೆಸರನ್ನಿಟ್ಟು ಈ ಪುಣ್ಯದಿನವನ್ನು ಜನಮಾನಸದಲ್ಲಿ ಶಾಶ್ವತವಾಗಿ ನೆನಪಿಲ್ಲಿ ಉಳಿಯವಂತೆ ಮಾಡಲಾಯಿತು.
ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್. ಶೆಟ್ಟಿಯವರು ‘ಶ್ರೀರಾಮನಗರ’ ನೂತನ ಹೆಸರಿನ ನಾಮಫಲಕವನ್ನು ಅನಾವರಣಗೊಳಿಸಿ, ಶ್ರೀರಾಮ ಪ್ರಾಣ ಪ್ರತಿಷ್ಠೆಯ ಈ ದಿನದಂದು ಈ ಪ್ರದೇಶಕ್ಕೆ ಶ್ರೀರಾಮ ನಗರ ಎಂಬ ಹೆಸರನ್ನು ಇಡುವ ಮೂಲಕ ರಾಮನ ಹೆಸರನ್ನು ನಿತ್ಯ ನೆನೆಯುವಂತೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಕೆ. ಸದಸ್ಯರಾದ ಶ್ರೀಮತಿ ರಚನಾ ಕೆ, ಮಂಜುನಾಥ್ ಕುಂಬ್ಳೆ, ಮಾಜಿ ಅಧ್ಯಕ್ಷೆ ಆಶಾಲತಾ, ಮಾಜಿ ಸದಸ್ಯೆ ಶ್ರೀಮತಿ ದೀಪಾ ಶೆಣೈ, ಸ್ಥಳೀಯ ನಿವಾಸಿಗಳಾದ ಕಾಶೀನಾಥ್ ಭಟ್, ಪ್ರಕಾಶ್ ಶೆಣೈ, ಪತ್ರಕರ್ತ ಬಿ.ಎಸ್.ಕುಲಾಲ್, ಉಮೇಶ್ ಹೆಬ್ಬಾರ್, ತಿಲಕ್‌ರಾಜ್, ಸಂತೋಷ್ ಕುಲಾಲ್, ಉಮೇಶ್ ಕುಲಾಲ್, ಹರೀಶ್ ನಾಯ್ಕ, ಶಿಕ್ಷಕ ಮಹೇಂದರ, ಶ್ರೀಮತಿ ಸುಜಯ, ಶ್ರೀಮತಿ ರತ್ನ, ದಿಶಾ ಅಜೇಯ್, ಅನುಷಾ ವಿ.ರೈ, ಗೀತಾ ಭಟ್ ಮೊದಲಾದವರು ಉಪಸ್ಥಿತರಿದ್ದರು.