ಬಂದಾರು : ಕೊಕ್ಕಡ ಹೋಬಳಿ ವ್ಯಾಪ್ತಿಗೆ ಒಳಪಟ್ಟ, ಬಂದಾರು -ಕೊಕ್ಕಡ ಗ್ರಾಮ ಸಂಪರ್ಕಿಸುವ ಪೆರ್ಲ -ಬೈಪಾಡಿಯ ಮೈಪಾಲ ಎಂಬಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಸಹಿತ ಕಿಂಡಿ ಆಣೆಕಟ್ಟು ಕಾಮಗಾರಿಯನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಜ.23 ರಂದು ಪರಿಶೀಲನೆ ಮಾಡಿದರು.
ಬಂದಾರು -ಕೊಕ್ಕಡ ಗ್ರಾಮ ಸಂಪರ್ಕಿಸುವ ಪೆರ್ಲ-ಬೈಪಾಡಿಯ ಮೈಪಾಲ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಆಣೆಕಟ್ಟು ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ತಿಯಾದರೆ ಕೊಕ್ಕಡ ನಾಡಕಛೇರಿ ತೆರಳಲು ಹನ್ನೊಂದು ಗ್ರಾಮಗಳ ನಾಗರಿಕರು ಹಲವು ವರ್ಷಗಳಿಂದ ಅಲೆದಾಡುವ ಪ್ರಸಂಗ ಕೊನೆಯಾಗುವ ಕಾಲ ಸನ್ನಿಹಿತವಾಗಲಿದೆ. ಬಂದಾರು, ಬೆಳಾಲು, ಮೊಗ್ರು, ಕೊಯ್ಯೂರು, ಕಣಿಯೂರು, ಇಳಂತಿಲ, ತಣ್ಣೀರುಪಂತ, ಕರಾಯ, ಮಚ್ಚಿನ, ಬಾರ್ಯ, ತೆಕ್ಕಾರು, ಗ್ರಾಮಗಳಿಗೆ ಗತ ಕಾಲಾದ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಶಾಸಕ ಹರೀಶ್ ಪೂಂಜರ ಅವಿರತ ಶ್ರಮದ ಫಲವಾಗಿ, ಅನುದಾನ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದೆ. ಆ ಭಾಗದ ನಾಗರಿಕರಲ್ಲಿ ಮಂದಹಾಸದ ನಗು ಕಾಣಿಸ್ತಾ ಇದೆ. ಕಟ್ಟಕಡೆಯ ಮೂಲೆಯಲ್ಲಿರುವ ಪ್ರದೇಶ ಇಂದು ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.
ಈ ಸಂದರ್ಭದಲ್ಲಿ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಯೋಗೀಶ್ ಆಲಂಬಿಲ. ಬಂದಾರು ಗ್ರಾ.ಪಂ ಅಧ್ಯಕ್ಷ ದಿನೇಶ್ ಗೌಡ, ತಾ.ಪಂ ಮಾಜಿ ಸದಸ್ಯರುಗಳಾದ ಕೃಷ್ಣಯ್ಯ ಆಚಾರ್ಯ, ಮಹಾಬಲ ಗೌಡ, ಬೈಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಗೌಡ ಪೆರ್ಲ, ಪ್ರಮುಖರಾದ ಹೊನ್ನಪ್ಪ ಗೌಡ ಸೋಣಕುಮೆರು, ಡೀಕಯ್ಯ ಗೌಡ, ದಿನೇಶ್ ಗೌಡ ಉಪಸ್ಥಿತರಿದ್ದರು.