24.6 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಜ.27 -29 : ಸೌತಡ್ಕ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳ ಲೋಕಾರ್ಪಣೆ: ಫೆ.2 ನೂತನ ‘ಸೇವಾ ಕೌಂಟರ್’ ಉದ್ಘಾಟನೆ ಹಾಗೂ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳಿಗೆ ‘ನರ್ತನ ಸೇವೆ’

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಕೊಕ್ಕಡವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾಯ ದತ್ತಿಗಳ ಇಲಾಖಾ ವ್ಯಾಪ್ತಿಗೊಳಪಟ್ಟ ಪ್ರವರ್ಗ ‘ಎ’ಗೆ ಸೇರಿದ ಅಧಿಸೂಚಿತ ಸಂಸ್ಥೆಯಾಗಿದ್ದು ಕರ್ನಾಟಕ ಸರ್ಕಾರದ ಆದೇಶದನ್ವಯ ಫೆ.3 ರಿಂದ ಅನ್ವಯವಾಗುವಂತೆ ಮೂರು ವರ್ಷದ ಅವಧಿಗೆ 9 ಮಂದಿ ಸದಸ್ಯರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು ಪ್ರಸಕ್ತ ಫೆ.3 ರಂದು ವ್ಯವಸ್ಥಾಪನಾ ಸಮಿತಿಯ ಅವಧಿಯು ಮುಕ್ತಾಯವಾಗಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ರವರು ತಿಳಿಸಿದರು.

ಅವರು ಜ.23ರಂದು ಸುವರ್ಣ ಆರ್ಕೆಡ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಮೂರು ವರ್ಷದ ಅವಧಿಯಲ್ಲಿ 8 ಮಂದಿ ಸದಸ್ಯರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಿಸಿದ್ದು ಈ ಸಂದರ್ಭದಲ್ಲಿ ದೇವಳದಲ್ಲಿ ಕೈಗೊಳ್ಳಲಾದ ಕಾರ್ಯಚಟುವಟಿಕೆಗಳಾದ ಧಾರ್ಮಿಕ ಚಟುವಟಿಕೆಗಳು, ಕ್ಷೇತ್ರದಲ್ಲಿ ಹಮ್ಮಿಕೊಂಡ ಅಭಿವೃದ್ದಿ ಕಾರ್ಯಗಳು., ಸಾಮಾಜಿಕ ಚಟುವಟಿಕೆಗಳು, ಕ್ಷೇತ್ರದ ಅಭಿವೃದ್ದಿಗಾಗಿ ಶೀಘ್ರ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು.

ಜ.27 ರಿಂದ ಜ.29 ರವರೆಗೆ ದೇವಳದಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳ ಲೋಕಾರ್ಪಣೆ ಕಾರ್ಯಕ್ರಮ ಜರಗಲಿದ್ದು ಜ. 27 ರಂದು ದೇವತಾ ಪ್ರಾರ್ಥನೆ, ನಾಗಬನದಲ್ಲಿ ಸ್ವಸ್ತಿ ಪುಣ್ಯಾಹ ವಾಚನ, ಪ್ರಾಸಾದ ಶುದ್ದಿ, ಸ್ಥಳ ಶುದ್ದಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಾಕಾರ ಬಲಿ, ಕಾರ್ಯಕ್ರಮ,ಜ.28 ರಂದು ಕಡೀರ ನಾಗಬನ, ಹಾಗೂ ರಕ್ತೇಶ್ವರಿ ಗುಡಿ, ಬಳಿ ಮಹಾಗಣಪತಿ ಹೋಮ, ಪ್ರತಿಷ್ಟಾ ಹೋಮ, ಕಲಶ ಪೂಜೆ, ಶ್ರೀ ನಾಗದೇವರ ಪ್ರತಿಷ್ಟೆ, ರಕ್ತೇಶ್ವರಿ ಪಂಜುರ್ಲಿ ದೈವಗಳ ಪ್ರತಿಷ್ಠೆ, ಕಡೀರ ನಾಗಬನದಲ್ಲಿ ಶ್ರೀ ನಾಗದೇವರ ಪುನ; ಪ್ರತಿಷ್ಟೆ, ಸಾಯಂಕಾಲ ಗಂಟೆ 3.೦೦ರಿಂದ ಭಜನಾ ಸೇವೆ ಹಾಗೂ ಜ.29 ರಂದು ಲೋಕಕಲ್ಯಾಣಾರ್ಥವಾಗಿ ‘ಅಷ್ಟೋತ್ತರ ಸಹಸ್ರನಾಳಿಕೇರ ಗಣಪತಿ ಹೋಮ’ ಕಾರ್ಯಕ್ರಮವೂ ಜರಗಲಿದೆ, ಹಾಗೂ ಅದೇ ದಿನ ‘ತಾಯಂದಿರು ಮಕ್ಕಳಿಗೆ ಹಾಲುಣಿಸುವ ನೂತನ ಕೊಠಡಿ’ ಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆಯಾದ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಳ, ಮಲಾರಬೀಡು. ಅವರು ಲೋಕಾರ್ಪಣೆ ಮಾಡಲಿದ್ದಾರೆ.

‘ಕ್ಷೇತ್ರ ಪರಿಚಯ ಪುಸ್ತಕ’ ವನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಶರತ್‌ಕೃಷ್ಣ ಪಡ್ವೆಟ್ನಾಯ ಅವರು ಲೋಕಾರ್ಪಣೆ ಮಾಡಲಿದ್ದಾರೆ. ದೇವಳದ ವಾಸ್ತುತಜ್ಞ ಶ್ರೀ ಜಗನ್ನಿವಾಸ ರಾವ್ ಪುತ್ತೂರು ಹಾಗೂ ಡಾ. ಶ್ರೀ ಶ್ರೀಧರ ಭಟ್, ಸಂಸ್ಕೃತ ಪ್ರಾಧ್ಯಾಪಕರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ) ಉಜಿರೆ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಳಗ್ಗೆ10.00 ಘಂಟೆಯಿಂದ ಶ್ರೀಮತಿ ಶರಣ್ಯಾನಂದನ್ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಲಿದೆ.

ಅಭಿವೃದ್ಧಿಗಾಗಿ ಶೀಘ್ರ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ವಿವರಿಸಿದ ಅಧ್ಯಕ್ಷರು ದೇವಳದ ವತಿಯಿಂದ ಗೋಶಾಲೆಯನ್ನು ನಡೆಸಲಾಗುತ್ತಿದ್ದು 230 ಕ್ಕೂ ಅಧಿಕ ಗೋವುಗಳನ್ನು ಪೋಷಿಸಲಾಗುತ್ತಿದ್ದು ಪ್ರಸಕ್ತ 0.80 ಎಕರೆ ಸ್ಥಳದಲ್ಲೇ ಅಧಿಕ ಸಂಖ್ಯೆಯ ಗೋವುಗಳನ್ನು ಪೋಷಿಸಲಾಗುತ್ತಿದ್ದು ದೇವಳದ ಪಕ್ಕದಲ್ಲಿ ಲಭ್ಯವಿರುವ ಕೆ.ಸಿ.ಡಿ.ಸಿ ಸ್ವಾಧೀನದಲ್ಲಿರುವ 10 ಎಕ್ರೆ ಜಮೀನನ್ನು ದೇವಳಕ್ಕೆ ಮಂಜೂರುಗೊಳಿಸುವಂತೆ ಕೋರಿ ಮನವಿ ಸಲ್ಲಿಸಲಾಗಿದೆ. ದೇವಳದ ಪಕ್ಕದಲ್ಲಿರುವ 240/2 ಬಿಯಲ್ಲಿ 0.58 ಎಕ್ರೆ ಸರ್ಕಾರಿ ಜಮೀನು, ಸರ್ವೇ ನಂಬ್ರ 318/5 ರಲ್ಲಿ 0.69 ಎಕ್ರೆ ಸರ್ಕಾರಿ ಜಾಗವಿದ್ದು ಇದು ದೇವಳದ ಅಭಿವೃದ್ದಿಗೆ ಪೂರಕವಾಗಿದ್ದು ಈ ಜಮೀನ್ನು ದೇವಳಕ್ಕೆ ಮಂಜೂರುಗೊಳಿಸುವರೇ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ ಪ್ರಸ್ತಾವಿರ ಜಮೀನ್ನು ಆದಷ್ಟು ಶೀಘ್ರ ಕಂದಾಯ ಇಲಾಖಾಧಿಕಾರಿಯವರು ದೇವಳಕ್ಕೆ ಮಂಜೂರುಗೊಳಿಸುವಂತೆ ಮತ್ತೊಮ್ಮೆ ವಿನಂತಿಸುತ್ತಿದ್ದೇವೆ.

ಈಗಾಗಲೇ ದಿನನಿತ್ಯ 2000ಕ್ಕೂ ಅಧಿಕ ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸುತ್ತಿದ್ದು ಅನ್ನಛತ್ರದ ಮೇಲಂತಸ್ತು ವಿಸ್ತರಣೆ, ಅಶ್ವತ್ಥ ಕಟ್ಟೆ, ಭಜನಾ ಮಂಟಪ ರಚನೆ, ಅನ್ನಛತ್ರಕ್ಕೆ ಅಗತ್ಯ ಪಾತ್ರೆಗಳ ಖರೀದಿ, ಗೋಶಾಲೆ ಬಳಿ ಸ್ವಾಗತ ದ್ವಾರ, ಸುಸಜ್ಜಿತ ದಾಸ್ತಾನು ಕೊಠಡಿಯನ್ನೊಳಗೊಂಡ ಪ್ರಸಾದ ತಯಾರಿ ಕಟ್ಟಡ ಮುಂತಾದ ಅಭಿವೃದ್ದಿ ಕಾರ್ಯಗಳನ್ನು ಶೀಘ್ರವೇ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ.

ಕ್ಷೇತ್ರವು ದಿನೇ ದಿನೇ ಅಭಿವೃದ್ದಿ ಹೊಂದುತ್ತಿದ್ದು ಕ್ಷೇತ್ರಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತಸಾಗರವೇ ಹರಿದು ಬರುತ್ತಿದ್ದು 2022-23ನೇ ಸಾಲಿನಲ್ಲಿ 10 ಕೋಟಿಗೂ ಅಧಿಕ ಆದಾಯ ಬಂದಿರುತ್ತದೆ. ದೇವಳಲ್ಲಿ ಒಟ್ಟು 63 ಮಂದಿ ಸಿಬ್ಬಂದಿಯವರು ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ಷೇತ್ರಕ್ಕೆ ಭಕ್ತಾದಿಗಳು ಹರಕೆ ರೂಪದಲ್ಲಿ ಸಲ್ಲಿಸಿರುವ 45 ಟನ್ ತೂಕದ ಕಂಚಿನ ಘಂಟಾಮಣಿಗಳು ದಾಸ್ತಾನಿದ್ದು ಘಂಟಾಮಣಿಗಳನ್ನು ಇ- ಹರಾಜು ಪ್ರಕ್ರಿಯೆ ನಡೆಸುವರೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಫೆ.2 ರಂದು ಬೆಳಗ್ಗೆ 10.00 ಕ್ಕೆ ನೂತನ ‘ಸೇವಾ ಕೌಂಟರ್’ ನ್ನು ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಿಂದ ಲೋಕಾರ್ಪಣೆ ಹಾಗೂ ಸಾಯಂಕಾಲ 5.30 ರಿಂದ ನೂತನವಾಗಿ ಪ್ರತಿಷ್ಟಾಪಿಸಲ್ಪಟ್ಟ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳಿಗೆ ‘ನರ್ತನ ಸೇವೆ’ ಜರಗಲಿದೆ. ಹಾಗೂ ಎಂದಿನಂತೆ ಫೆ.13ನೇ ಮಂಗಳವಾರ ಮಾಘಶುದ್ದ ಚೌತಿಯಂದು ದೇವಳದ ವಾರ್ಷಿಕ ಜಾತ್ರೆ ‘ಮೂಡಪ್ಪ ಸೇವೆ’ ಯೂ ಜರಗಲಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪುರಂದರ ಕೆ. ಕಡೀರ, ಪ್ರಶಾಂತ್ ಪಿ. ಪೂವಾಜೆ, ವಿಠಲ ಕೆ ಕುರ್ಲೆ, ನವೀನ್ ಕೆ., ಶ್ರೀಮತಿ ಯಶೋದ, ಶ್ರೀಮತಿ ಹೇಮಾವತಿ ಶಿವಾನಂದ ಸಂಕೇಶ ಉಪಸ್ಥಿತರಿದ್ದರು.

Related posts

ಹದಗೆಟ್ಟ ರಾಜ್ಯದ ಆರ್ಥಿಕತೆ ತುಂಬಲು ಕುಮ್ಕಿ ಭೂಮಿಯ ಕಬಳಿಕೆಗೆ ಸರಕಾರದ ಹುನ್ನಾರ: ಬಿಜೆಪಿ ರೈತ ಮೋರ್ಚಾ ಆಕ್ರೋಶ

Suddi Udaya

ಚಿಬಿದ್ರೆ: ಪಿತ್ತಿಲು ನಿವಾಸಿ ದಯಾನಂದ ಪಿ ನಿಧನ

Suddi Udaya

ಕೊಲ್ಲಿಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ: ಸ್ವಚ್ಛತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ: ಭವಾನಿ ಶಂಕರ್

Suddi Udaya

ಗುರುವಾಯನಕೆರೆ ಶಕ್ತಿನಗರದ ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಪೊಲೀಸ್ ದಾಳಿ: ಇಬ್ಬರ ಬಂಧನ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷರಾಗಿ ಸವಿತಾ, ಉಪಾಧ್ಯಕ್ಷರಾಗಿ ಲೋಕನಾಥ್ ಶೆಟ್ಟಿ ಆಯ್ಕೆ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya
error: Content is protected !!